fbpx
ಸಮಾಚಾರ

ದೈಹಿಕವಾಗಿ ಬಳಸಿಕೊಂಡು ಪ್ರಿಯಕರನಿಂದ ಮೋಸ: ಸೆಲ್ಫಿ ವಿಡಿಯೋ ಮಾಡಿ ಕನ್ನಡ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು

ಸ್ಯಾಂಡಲ್ ವುಡ್ ನಲ್ಲಿ ಆಗ್ಗಾಗ್ಗೆ ಲೈಂಗಿಕ ಕಿರುಕುಳ ಪ್ರಕರಣಗಳು ಒಂದೊಂದಾಗೆ ಆಚೆ ಬರುತ್ತಿವೆ ಆ ಸಾಲಿಗೆ ಈಗ ಮತ್ತೊಂದು ಸೆಕ್ಸ್ ದೋಖಾ ಪ್ರಕರಣ ಸೇರಿಕೊಂಡಿದೆ. ಪ್ರೀತಿಸಿ ಮೋಸ ಹೋದ ಕಿರುತೆರೆ ನಿರೂಪಕಿ/ ನಟಿ ಚಂದನಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಂದನಾ ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದೇ ಮೇ 28 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವಕನ ಮೋಸಕ್ಕೆ ಬಲಿಯಾದ ನಟಿ ಸೆಲ್ಫಿ ವಿಡಿಯೋದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ದಿನೇಶ್ ಎಂಬಾತನನ್ನು ಚಂದನಾ ಪ್ರೀತಿಸುತ್ತಿದ್ದರು. ಅಲ್ಲದೆ, ಮದುವೆ ಆಗುವ ನಿರ್ಧಾರವನ್ನು ಕೂಡ ಇಬ್ಬರು ತೆಗೆದುಕೊಂಡಿದ್ದರು.

ದಿನೇಶ್ ಚಂದನಾರನ್ನು ಮದುವೆಯಾಗುವುದಾಗಿ ನಂಬಿಸಿ 5 ಲಕ್ಷ ಹಣವನ್ನು ಪಡೆದುಕೊಂಡಿದ್ದನು. ಅಷ್ಟೇ ಅಲ್ಲದೇ ಆರೋಪಿ ಚಂದನಾ ಜೊತೆ ಲೈಂಗಿಕ ಸಂಪರ್ಕ ಕೂಡ ಹೊಂದಿದ್ದನು. ಅಷ್ಟೇ ಅಲ್ಲದೇ ಚಂದನಾರಿಗೆ ಗರ್ಭಪಾತ ಕೂಡ ಮಾಡಿಸಿದ್ದನು ಎಂದು ಹೇಳಲಾಗಿದೆ. ಲಕ್ಷ, ಲಕ್ಷ ಹಣ ಪಡೆದು ಮದುವೆಯಾಗಲು ನಿರಾಕರಿಸಿದ್ದಾನೆ. ಅಲ್ಲದೇ ಆರೋಪಿ ಚಂದನಾರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದನು.

ಈ ಎಲ್ಲ ಘಟನೆಯಿಂದ ಮನನೊಂದ ಚಂದನಾ ಮೇ 28 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ಕೂಡಲೇ ಅವರನ್ನು ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚಂದನ ಮೃತಪಟ್ಟಿದ್ದಾರೆ. ದಿನೇಶ್​ ಮಾರತ್ತಹಳ್ಳಿಯ ಕಂಪನಿಯೊಂದಲ್ಲಿ ಸಾಪ್ಟ್​​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಚಂದನಾ ಹಾಸನದ ಬೇಲೂರು ಮೂಲದವರು. ಸದ್ಯ ದಿನೇಶ್ ಹಾಗೂ ಆತನ ಕುಟುಂಬದವರ ಮೇಲೆ ದೂರು ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top