fbpx
ಸಮಾಚಾರ

ಚಿರು ಸರ್ಜಾ ನೆನ್ನೆ ಮಾಡಿದ್ದ ಕೊನೆಯ ಪೋಸ್ಟ್ ಇದು: ವಿಧಿಯಾಟ ಹೇಗಿದೆ ನೋಡಿ

ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ(39) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನಿನ್ನೆ ಲಘು ಹೃದಯಘಾತದಿಂದಾಗಿ ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಸಾವನಪ್ಪಿದ್ದಾರೆ.

 

 

ಈ ಮದ್ಯೆ ನಟ ಚಿರಂಜೀವಿ ಸರ್ಜಾ ನಿನ್ನೆ ಇನ್‍ಸ್ಟಾಗ್ರಾಂನಲ್ಲಿ ಮಾಡಿದ್ದ ಪೋಸ್ಟ್ ವೈರಲ್ ಆಗುತ್ತಿದೆ. ನೆನ್ನೆ ಚಿರಂಜೀವಿ ಸರ್ಜಾ ಅವರು ತಮ್ಮ ಧೃವ ಸರ್ಜಾ ಜೊತೆಗಿನ ಫೋಟೋ ಹಾಕಿಕೊಂಡಿದ್ದರು. ಅಂದು-ಇಂದು ನಾವೆಲ್ಲರೂ ಒಂದೇ. ನೀವು ಏನ್ ಹೇಳ್ತೀರಿ ಎಂದು ಬರೆದುಕೊಂಡಿದ್ದರು.

ಅಂದಹಾಗೆ ದಂಡಂ ದಶಗುಣಂ, ವರದ ನಾಯಕ, ಸಿಂಗ, ಅಮ್ಮ ಐಲವ್ ಯೂ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಚಿರಂಜೀವಿ ಸರ್ಜಾ ನಟಿಸಿದ್ದರು. ಚಿರಂಜೀವಿ ಸರ್ಜಾ ಹಿರಿಯ ನಟ ಸುಂದರ್‌ ರಾಜ್ ಪುತ್ರಿ ಮೇಘನಾ ರಾಜ್ ಅವರನ್ನು ಮದುವೆಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top