fbpx
ಸಮಾಚಾರ

ಸಿಎಂ ಅರವಿಂದ್ ಕೇಜ್ರಿವಾಲ್​ಗೂ ಕೊರೋನಾ ಲಕ್ಷಣಗಳು: ಎಲ್ಲಾ ಸಭೆ, ಸಮಾರಂಭಗಳು ರದ್ದು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಟೈಮ್ ನಲ್ಲಿ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಅನಾರೋಗ್ಯ ಉಂಟಾಗಿದೆ. ನಿನ್ನೆಯಿಂದ ಕೇಜ್ರಿವಾಲ್‌ಗೆ ಜ್ವರ, ಗಂಟಲು ಕಿರಿಕಿರಿ ಕಾಣಿಸಿಕೊಂಡಿದೆ. ಹೀಗಾಗಿ ನಾಳೆ ಬೆಳಗ್ಗೆ ಅರವಿಂದ ಕೇಜ್ರಿವಾಲ್‌ಗೆ ಕೊರೊನಾ ಟೆಸ್ಟ್ ಮಾಡಲಾಗುತ್ತೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನದಿಂದಲೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಮಾಡಿದ್ದಾರೆ. ಸಭೆಗಳನ್ನು ಮುಂದೂಡಲಾಗಿದ್ದು, ಹೋಂ ಕ್ವಾರಂಟೈನ್ ನಲ್ಲಿರಲು ಸಿದ್ಧತೆ ನಡೆಸಲಾಗಿರುವ ಮಾಹಿತಿಯಿದೆ. ಜ್ವರ ಕಾಣಿಸಿಕೊಂಡ ನಂತರ ಕೇಜ್ರಿವಾಲ್ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ. ಯಾರಿಗೂ ಭೇಟಿಯಾಗಲು ಅವಕಾಶ ನೀಡಲಾಗುತ್ತಿಲ್ಲ. ಸದ್ಯ ಮನೆಯಲ್ಲೇ ಕ್ವಾರಂಟೈನ್ ಗೆ ಅರವಿಂದ ಕೇಜ್ರಿವಾಲ್‌ ಒಳಗಾಗಿದ್ದಾರೆ.

ಅಂದಹಾಗೆ ಉಸಿರಾಟದ ತೊಂದರೆ, ಕೆಮ್ಮು, ಗಂಟಲು ನೋವಿಗಾಗಿ ಪ್ರಕೃತಿ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಂಡಿದ್ದ ಕೇಜ್ರಿವಾಲ್ ಬೆಂಗಳೂರಿನ ಜಿಂದಾಲ್ ಆಸ್ಪತ್ರೆಯಲ್ಲಿ ಈ ಮುಂಚೆ ಚಿಕಿತ್ಸೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top