fbpx
ಸಮಾಚಾರ

ಚಿರಂಜೀವಿ ಸರ್ಜಾ ಸಾವಿನ ವಿಚಾರವಾಗಿ ಎಡವಟ್ಟು ಮಾಡಿದ ಶೋಭಾ ಡೇ: ಫ್ಯಾನ್ಸ್ ಗರಂ

ಸ್ಯಾಂಡಲ್ ವುಡ್ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಸಾವಿನ ಸುದ್ದಿ ಇಡೀ ಕರುನಾಡಿಗೆ ದೊಡ್ಡ ಆಘಾತವೊಂಟು ಮಾಡಿದೆ. ಕೇವಲ 39ನೇ ವಯಸ್ಸಿನಲ್ಲಿಯೇ ಚಿರು ಜೀವನವನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅರಗಿಸಿಕೊಳ್ಳಲಾಗದ ಚಿರು ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

 

 

ಈ ಮದ್ಯೆ ಚಿರಂಜೀವಿ ಸರ್ಜಾ ಸಾವಿನ ವಿಚಾರವಾಗಿ ಖ್ಯಾತ ಲೇಖಕಿ, ಅಂಕಣಗಾರ್ತಿ ಶೋಭಾ ಡೇ ಅವರು ಪ್ರಮಾದವೊಂದನ್ನ ಮಾಡಿದ್ದಾರೆ. ಚಿರಂಜೀವಿ ಸರ್ಜಾ ನಿಧನ ಸುದ್ದಿಯನ್ನು ಟ್ವೀಟ್ ಮಾಡುವ ಸಂದರ್ಭದಲ್ಲಿ ಶೋಭಾ ಡೇ ಎಡವಟ್ಟು ಮಾಡಿಕೊಂಡಿದ್ದಾರೆ.

ಸಂಜೆ 4 ಗಂಟೆ 8 ನಿಮಿಷಕ್ಕೆ ಮತ್ತೊಬ್ಬ ಶೈನಿಂಗ್ ಸ್ಟಾರ್ ಹೋಗಿದ್ದಾರೆ. ಎಂತ ದುರಂತ ಅಂತ್ಯ. ದು:ಖವನ್ನು ಬರಿಸುವ ಶಕ್ತಿ ಆ ಕುಟುಂಬ ಸದಸ್ಯರಿಗೆ ಸಿಗಲಿ ಎಂದು ಚಿರುಸರ್ಜಾ ಟ್ಯಾಗ್ ಮಾಡಿ ಮೆಗಾ ಸ್ಟಾರ್ ಚಿರಂಜೀವಿ ಅವರ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಫೋಟೋ ಬದಲು ಮೆಗಾ ಸ್ಟಾರ್ ಚಿರಂಜೀವಿ ಅವ್ರ ಫೋಟೋ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ.

ಚಿರು ಸರ್ಜಾ ಬದಲು ಮೆಗಾ ಸ್ಟಾರ್ ಚಿರಂಜೀವಿ ಫೋಟೋ ಹಾಕಿದ್ದ ಜನ ಸಾಮಾಜಿಕ ಜಾಲತಾಣದಲ್ಲಿ ಶೋಭಾ ಡೇ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ದಕ್ಷಿಣ ಭಾರತ ಸ್ಟಾರ್ ಗಳ ಬಗ್ಗೆ ನಿಮಗೆ ಎಷ್ಟು ಪರಿಚಯವಿದೆ ಎನ್ನುವುದು ನಿಮ್ಮ ಟ್ವೀಟ್ ನಿಂದಲೇ ತಿಳಿಯುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top