fbpx
ಸಮಾಚಾರ

ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡುವಂತೆ ಸರ್ಕಾರಕ್ಕೆ ಪತ್ರ ಬರೆದ ಸಂಸದ ಜಿಸಿ ಚಂದ್ರಶೇಖರ್

`ನಮ್ಮ ಮೆಟ್ರೋನ ಯಾವುದಾದರೂ ಒಂದು ನಿಲ್ದಾಣಕ್ಕೆ ದಿವಂಗತ ಚಿತ್ರನಟ ಶಂಕರ್ ನಾಗ್ ಅವರ ಹೆಸರಿಡಬೇಕೆಂದು ವರ್ಷಗಳ ಕಾಲದಿಂದಲೂ ಕನ್ನಡಿಗರು ಆಗ್ರಹಿಸುತ್ತಲೇ ಬಂದಿದ್ದಾರೆ. ಇದೀಗ ಮೆಟ್ರೋ ನಿಲ್ದಾಣಕ್ಕೆ ದಿವಂಗತ ಚಿತ್ರನಟ ಶಂಕರ್ ನಾಗ್ ಅವರ ಹೆಸರಿಡಬೇಕೆಂದು ಎಂದು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಮಲ್ಲೇಶ್ವರ ಮಂತ್ರಿ ಸ್ಕ್ವೇರ್‌ನ ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಮೆಟ್ರೋ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ಮುಖ್ಯಮಂತ್ರಿಗಳ ಕಚೇರಿ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಮಲ್ಲೇಶ್ವರ ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣಕ್ಕೆ ಅಥವಾ ಯಾವುದಾದರೂ ಪ್ರಮುಖ ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂಬುದಾಗಿ ಕನ್ನಡ ಸಂಘಟನೆಗಳ ಒಕ್ಕೂಟ ಮನವಿ ಮಾಡಿದ್ದಾರೆ. ಈ ಪ್ರಸ್ತಾವನೆಯನ್ನು ಅನುಮೋದಿಸಬೇಕು ಎಂದು ಚಂದ್ರಶೇಖರ್ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

 

 

“ದಿವಂಗತ ಶಂಕರ್‌ನಾಗ್‌ ಕನ್ನಡ ನಾಡಿನ ರಂಗಭೂಮಿಯಿಂದ ಬಂದು ಅತ್ಯಂತ ಜನಪ್ರಿಯ ನಾಯಕ ನಟರಾಗಿ, ಚಿತ್ರ ನಿರ್ದೇಶಕರಾಗಿ ಯಶಸ್ಸನ್ನು ಗಳಿಸಿ ಸಮಸ್ತ ಕನ್ನಡ ಜನಮಾನಸದಲ್ಲಿ ಬೆರೆತಿರುತ್ತಾರೆ. ಅದರಂತೆ ಮಾಲ್ಗುಡಿ ಢೇಸ್‌ ಮುಖಾಂತರ ಭಾರತದಾದ್ಯಂತ ಹೆಸರುವಾಸಿಯಾಗಿದ್ದರು. ದಿವಂಗತ ಶಂಕರ್‌ನಾಗ್‌ ರವರು ಮೂರು ದಶಕಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ಸೇವೆಯನ್ನು ತರಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದರು ಹಾಗೂ ಅವರು ನಮ್ಮನಗಲಿ ಮೂರು ದಶಕಗಳಾದರೂ ಇಂದಿಗೂ ಬೆಂಗಳೂರಿನಲ್ಲಿರುವ ಬಹುತೇಕ ಆಟೋ ಚಾಲಕರು ತಮ್ಮ ವಾಹನಗಳ ಮೇಲೆ ಶಂಕರ್‌ನಾಗ್‌ ರವರ ಭಾವಚಿತ್ರವನ್ನು ಅಂಟಿಸುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿರುತ್ತಾರೆ.

“ದಿವಂಗತ ಶ೦ಕರ್‌ನಾಗ್‌ ಇವರ ಹೆಸರನ್ನು ಚಿರಸ್ಥಾಯಿಯಾಗಿಸಲು ಕನ್ನಡ ಸಂಘಟನೆಗಳ ಒಕ್ಕೂಟ, ಬೆ೦ಗಳೂರು ಇವರು ತಮ್ಮ ಮನವಿಯಲ್ಲಿ ಮಲ್ಲೇಶ್ವರ೦ ಮಂತ್ರಿ ಸ್ವ್ಯೇರ್‌ ಮೆಟ್ರೋ ನಿಲ್ದಾಣಕ್ಕೆ ಅಥವಾ ಬೆ೦ಗಳೂರಿನ ಯಾವುದಾದರು ಪ್ರಮುಖ ಮೆಟ್ರೋ ನಿಲ್ದಾಣಕ್ಕೆ ದಿವಂಗತ ಶಂಕರ್‌ ನಾಗ್‌ ಮೆಟ್ರೋ ನಿಲ್ದಾಣವೆಂದು ನಾಮಕರಣ ಮಾಡುವಂತೆ ಕೋರಿರುವ ಮನವಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಸದರಿ ಸಂಘಟನೆಯವರ ಮನವಿಯು ಅತ್ಯಂತ ಸಮಂಜಸವಾಗಿರುವುದರಿಂದ ಬೆಂಗಳೂರಿನ ಯಾವುದಾದರು ಪ್ರಮುಖ ಮೆಟ್ರೋ ನಿಲ್ದಾಣಕ್ಕೆ ಶಂಕರ್‌ ನಾಗ್‌ ಮೆಟ್ರೋ ನಿಲ್ದಾಣವೆಂದು ನಾಮಕರಣ ಮಾಡುವಂತೆ ಕೋರಿರುವ ಪ್ರಸ್ತಾವನೆಯನ್ನು ಅನುಮೋದಿಸುತ್ತಾ ಸದರಿ ವಿಷಯವಾಗಿ ಸೂಕ್ತ ಕ್ರಮವಹಿಸುವಂತೆ ಕೋರಿದೆ.” ಎಂದು ಸಂಸದರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಎಂಬತ್ತರ ದಶಕದಲ್ಲಿ ಶಂಕರ್ ನಾಗ್ ವಿಶ್ವ ಪರ್ಯಟನೆ ಮಾಡಿ ಅಲ್ಲಿನ ಮೆಟ್ರೋ ಯೋಜನೆ ಬಗ್ಗೆ ಅಧ್ಯಯನ ಮಾಡಿದ್ದರು. ಬಳಿಕ ಬೆಂಗಳೂರಿಗೂ ಮೆಟ್ರೋ ತರಬೇಕೆಂಬ ಮಹಾದಾಸೆಯಿಂದ ಸ್ವಂತ ಖರ್ಚಿನಲ್ಲಿ ಸಮಗ್ರ ಮಾಹಿತಿ ಸಂಗ್ರಹಿಸಿದ್ದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜೊತೆಗೆ ಮೆಟ್ರೋ ಸಾಧಕಗಳ ಬಗ್ಗೆ ಚರ್ಚಿಸಿದ್ದರು. ಅಂದು ಶಂಕರ್ ನಾಗ್ ನೆಟ್ಟ ಮೆಟ್ರೋ ಸಸಿಯೇ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಆದ್ದರಿಂದ ಸರ್ಕಾರ ಈಗಿನ ನಮ್ಮ ಮೆಟ್ರೋಗೆ ಶಂಕರ್ ಮೆಟ್ರೋಎಂದು ನಾಮಕರಣ ಮಾಡಬೇಕೆಂದು ಕನ್ನಡಪರ ಕಾರ್ಯಕರ್ತರು ಅನೇಕ ವರ್ಷಗಳಿಂದಲೂ ಒತ್ತಾಯಿಸಿತ್ತಾ ಬಂದಿದ್ದಾರೆ.

ಅಷ್ಟೇ ಅಲ್ಲದೆ ಮೂಲತಃ ಶಂಕರ್ ನಾಗ್ ಅವರು ಚಿತ್ರ ನಟರಾಗಿದ್ದರೂ ಸಮಾಜದ ಬಗ್ಗೆ ತುಂಬಾ ಕಳಕಳಿ ಹೊಂದಿದ್ದರು. ಅದರಲ್ಲೂ ಬೆಂಗಳೂರಿನ ಮೇಲೆ ವಿಶೇಷ ಪ್ರೀತಿ ಹೊಂದಿದ್ದ ಅವರು, ಕನ್ನಡ ಚಿತ್ರರಂಗದ ಅಭಿವೃದ್ಧಿ ಸಾಕಷ್ಟು ಶ್ರಮಿಸಿದ್ದರು. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಜನಪರ ಕೆಲಸಗಳನ್ನು ಮಾಡುತ್ತಿದ್ದರು. ಹೀಗಾಗಿ ನಮ್ಮ ಮೆಟ್ರೋಗೆ ಶಂಕರ್ ನಾಗ್ ಮೆಟ್ರೋ ಎಂದು ನಾಮಕರಣ ಮಾಡಬೇಕು ಎಂಬುದು ಕನ್ನಡಿಗರ ಆಶಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top