fbpx
ಸಮಾಚಾರ

ಶುಭಾ ಪೂಂಜಾಗೆ ಕೂಡಿ ಬಂತು ಕಂಕಣ ಭಾಗ್ಯ: ಪ್ರಿಯಕರನೊಂದಿಗೆ ಸಪ್ತಪದಿ ತುಳಿಯಲು ಸಜ್ಜಾದ ನಟಿ

ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ನಟಿ ಶುಭಾ ಪೂಂಜಾ ಹಸೆಮಣೆ ಏರಲು ಸಿದ್ದತೆ ನಡೆಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಅನೇಕ ಚಿತ್ರಗಳ ಮೂಲಕ ಗಮನ ಸೆಳೆದ ಇವರ ವಿವಾಹವು ಕುಂದಾಪುರ ಮೂಲದ ಉದ್ಯಮಿ ಸುಮಂತ್‌ ಬಿಲ್ಲವ ಅವರೊಂದಿಗೆ ನೆರವೇರಲಿದೆ.

ಶುಭಾ ಮದುವೆಯಾಗುವ ಹುಡುಗ ಯಾರು?
ಶುಭಾ ಪೂಂಜಾ ಮದುವೆಯಾಗುತ್ತಿರುವ ಹುಡುಗನ ಹೆಸರು ಸುಮಂತ್ ಮಹಾಬಲ. ಇವರು ಮಂಗಳೂರು ಮೂಲದವರು. ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿ ಸುಮಂತ್ ಕೆಲಸ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಗ್ಯಾಸ್ ಏಜೆನ್ಸಿ ಕೂಡ ನಡೆಸುತ್ತಿದ್ದಾರೆ.

ಸುಮಂತ್ ಅವರ ಒಂದು ಕಾರ್ಯಕ್ರಮದಲ್ಲಿ ಶುಭಾ ಹೋಗಿದ್ದರು. ಅಲ್ಲಿಂದ ಶುಭಾ ಮತ್ತು ಸುಮಂತ್ ಪರಿಚಯ ಬೆಳೆದಿದೆ. ಕಳೆದ ನವೆಂಬರ್‌ನಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಬರುವ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರಂತೆ. ಶುಭಾ ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಲಾಕ್ ಡೌನ್ ಇರೋದರಿಂದ ಅವರು ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ಪ್ರಿಯಕರನ ಜೊತೆ ಉಂಗುರ ಬದಲಾಯಿಸಿಕೊಳ್ಳಲಿದ್ದಾರಂತೆ.

ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರ ಬಳಿ ಹೇಳಿಕೊಂಡಿದ್ದು, ಎರಡು ಎರಡು ಕುಟುಂಬದರು ಇವರ ಪ್ರೀತಿ ಒಪ್ಪಿಗೆ ಸೂಚಿಸಿದ್ದಾರೆ. ಹಾಗೆಯೇ ಇದೇ ವರ್ಷ ವಿವಾಹವನ್ನು ಡಿಸೆಂಬರ್​ನಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲೇ ಮದುವೆ ದಿನಾಂಕವನ್ನು ಘೋಷಿಸುವುದಾಗಿ ಶುಭಾ ತಿಳಿಸಿದ್ದಾರೆ. ಮದುವೆ ಕಾರ್ಯಕ್ರಮ ಮಂಗಳೂರಿನಲ್ಲಿ ಹಾಗೂ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top