fbpx
ಸಮಾಚಾರ

ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆ: ಅರ್ಜಿ ಸಲ್ಲಿಸಲು ಅವಧಿ​ ವಿಸ್ತರಣೆ

2020-21ನೇ ಸಾಲಿನ ಪೊಲೀಸ್‌ ಕಾನ್ಸ್‌ಟೇಬಲ್‌ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿ ಅವಲೋಕಿಸಿ ಈ ಹಿಂದೆ ನಿಗ​ಪಡಿಸಲಾಗಿದ್ದ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಮಾತ್ರ ವಿಸ್ತರಿಸಲಾಗಿದ್ದು, ಇನ್ನುಳಿದಂತೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂದು ಜಿಲ್ಲಾ ಪೊಲೀಸ್‌ ಅ​ಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಿ.ಪಿ.ಸಿ. (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ) ಹುದ್ದೆಗಳ ಸಂಖ್ಯೆ 558, ಎ.ಪಿ.ಸಿ.(ಪುರುಷ)(ಸಿಎಆರ್‌/ಡಿಎಆರ್‌) (ಕಲ್ಯಾಣ ಕರ್ನಾಟಕ) ಹುದ್ದೆಗಳ ಸಂಖ್ಯೆ-444, ಅರ್ಜಿ ಸಲ್ಲಿಸಲು ಜು.9 ಕೊನೆಯ ದಿನ. ಶುಲ್ಕ ಪಾವತಿಸಲು ಜೂಲೈ 13 ಕೊನೆಯ ದಿನ..

ಸಿ.ಪಿ.ಸಿ.(ಪುರುಷ ಮತ್ತು ಮಹಿಳಾ),ಹುದ್ದೆಗಳ ಸಂಖ್ಯೆ-2007, ಎ.ಪಿ.ಸಿ.(ಪುರುಷ) (ಸಿಎಆರ್‍/ಡಿಎಆರ್‌), ಹುದ್ದೆಗಳ ಸಂಖ್ಯೆ-1005, ಅರ್ಜಿ ಸಲ್ಲಿಸಲು ಜು.13 ಹಾಗೂ ಶುಲ್ಕ ಪಾವತಿಸಲು ಜೂಲೈ 15 ಕೊನೆಯ ದಿನ.

ಸ್ಪೇ.ಆರ್.ಪಿ.ಸಿ. (ಪುರುಷ ಮತ್ತು ಮಹಿಳಾ) (ಕೆ.ಎಸ್.ಆರ್.ಸಿ ಮತ್ತು ಐ.ಆರ್.ಬಿ.) 2420 ಹುದ್ದೆಗಳಿಗೆ ಹಾಗೂ ಸ್ಟೇ.ಆರ್.ಪಿ.ಸಿ. (ಪುರುಷ) ಬ್ಯಾಂಡ್ಸ್‌ಮನ್ (ಕೆ.ಎಸ್.ಆರ್.ಪಿ. ಮತ್ತು ಐ.ಆರ್.ಬಿ.) 252 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 6 ರವರೆಗೆ ಶುಲ್ಕ ಪಾವತಿಯನ್ನು ಜುಲೈ 8 ರವರೆಗೆ ವಿಸ್ತರಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top