fbpx
ಸಮಾಚಾರ

ರಾಜಕಾರಣಿ ಮುನಿರತ್ನ ಸಹೋದರ, ಕುಖ್ಯಾತ ಪಾತಕಿ ಓಂ ಸಿನಿಮಾದಲ್ಲೂ ನಟಿಸಿದ್ದ ಕೊರಂಗು ಕೃಷ್ಣ ಸಾವು

ಮುತ್ತಪ್ಪ ರೈ ನಂತರ ಬೆಂಗಳೂರಿನ ಮತ್ತೋರ್ವ ಕುಖ್ಯಾತ ಪಾತಕಿ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣಾ ಸಾವನ್ನಪ್ಪಿದ್ದಾನೆ. ರಾಜಕಾರಣಿ ಮುನಿರತ್ನ ಅವರ ಸಹೋದರನೂ ಆಗಿರುವ ಕೊರಂಗು ಕೃಷ್ಣ ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಮತ್ತು ಪ್ರೇಮ ಅಭಿನಯದ ‘ಓಂ’ ಚಿತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದನು. ಕೊರಂಗು ಕೃಷ್ಣ ಕರಳುಬೇನೆಯಿಂದ ಬಳಲುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಕೊರಂಗುಗೆ ಮಧುಮೇಹ, ಅಧಿಕ ರಕ್ತದೊತ್ತಡ ಕೂಡಾ ಇತ್ತು. ಆಂಧ್ರದ ಚಿತ್ತೂರಿಗೆ ಮರಳಿ ಕೊನೆಕಾಲ ಕಳೆಯಲು ನಿರ್ಧರಿಸಿದ್ದ. ಆದರೆ, ಅನಾರೋಗ್ಯಕ್ಕೆ ತುತ್ತಾದ ಕೊರಂಗು ಮತ್ತೆ ಚೇತರಿಸಿಕೊಳ್ಳಲಿಲ್ಲ. ಚಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

90ರ ದಶಕದಲ್ಲಿ ಬೆಂಗಳೂರಲ್ಲಿ ಕೊರಂಗು ಕೃಷ್ಣ ಭಾರೀ ಸದ್ದು ಮಾಡಿದ್ದ. ಕೊಲೆ, ಸುಲಿಗೆ, ಜೀವ ಬೆದರಿಕೆ ಹಾಕುವುದರಲ್ಲಿ ಈತನದ್ದು ಎತ್ತಿದ ಕೈ.. ದಶಕದ ಹಿಂದೆ ಹೆಬ್ಬಟ್ಟು ಮಂಜ ಅಂಡ್ ಟೀಂ ನಿಂದ ಕೊರಂಗೂ ಮೇಲೆ ಆಟ್ಯಾಕ್ ಆಗಿತ್ತು. ಹಿರಿಯೂರು ಡಾಬಾದಲ್ಲಿ ನಡೆದ ದಾಳಿಯಲ್ಲಿ ಕೊರೊಂಗು ಕೈ ಕಟ್ ಆಗಿ ಬದುಕುಳಿದ್ದಿದ್ದ. ಈತನನ್ನು ಬೆಂಗಳೂರಿನಿಂದ ಗಡೀಪಾರು ಮಾಡಲಾಗಿತ್ತು. ನಂತರ ಈತ ಚಿತ್ತೂರಿನಲ್ಲಿ ಹೋಗಿ ನೆಲೆಸಿದ್ದ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top