fbpx
ಸಮಾಚಾರ

ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ: ಬರೋಬ್ಬರಿ 36,261 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಕರ್ನಾಟಕ ರಾಜ್ಯ ಸರ್ಕಾರವು 36,261 ನಾಗರಿಕ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ತಿಗೆ ಕರಡು ಅಧಿಸೂಚನೆ ಸಿದ್ಧಪಡಿಸಿದೆ. ಕರ್ನಾಟಕ ರಾಜ್ಯ ಪೊಲೀಸ್‌ ಮಿನಿಸ್ಟೆರಿಯಲ್ ಸರ್ವೀಸೆಸ್ (ನೇಮಕಾತಿ) (ತಿದ್ದುಪಡಿ) ನಿಯಮಗಳು 2020, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ನಿಯಮಗಳು 1978, ರ ನಿಯಮಗಳ ಪ್ರಕಾರ ಈ ಬೃಹತ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಕ್ಕೆ ಕರಡು ಅಧಿಸೂಚನೆ ನೀಡಲಾಗಿದೆ.

ನೇರ ನೇಮಕಾತಿ ಮೂಲಕ ಶೇಕಡ.67.50 ರಷ್ಟು ಪುರುಷ ಅಭ್ಯರ್ಥಿಗಳನ್ನು, ಶೇಕಡ.22.50 ರಷ್ಟು ಮಹಿಳಾ ಅಭ್ಯರ್ಥಿಗಳನ್ನು, ಶೇಕಡ.10 ರಷ್ಟು ಅಭ್ಯರ್ಥಿಗಳನ್ನು ಈಗಾಗಲೇ ಸೇವೆಯಲ್ಲಿರುವ ಸಿಎಆರ್ ಅಥವಾ ಡಿಎಆರ್ ಅಥವಾ ಕೆಎಸ್‌ಆರ್‌ಪಿ ಅಥವಾ ಕೆಎಸ್‌ಐಎಸ್‌ಎಫ್‌ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಒಟ್ಟು 36,361 ಹುದ್ದೆಗಳ ಭರ್ತಿಗೆ ಕರಡು ಅಧಿಸೂಚನೆ ಪ್ರಕಟವಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ 23,500ದಿಂದ 47,650ರೂ. ವರೆಗೆ ವೇತನವನ್ನೂ ನಿಗದಿ ಮಾಡಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರಿಗೂ ಅವಕಾಶವಿದೆ. ಈ ಅಧಿಸೂಚನೆಯ ಕುರಿತು ಯಾರಿಗಾದರೂ ಆಕ್ಷೇಪಣೆಗಳು ಇದ್ದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ವಿಧಾನಸೌಧ, ಬೆಂಗಳೂರು 560001 ಈ ವಿಳಾಸಕ್ಕೆ ಅಧಿಸೂಚನೆ ಪ್ರಕಟವಾದ ಹದಿನೈದು ದಿನಗಳಲ್ಲಿ ಸಲ್ಲಿಸಬಹುದು.

ವಯೋಮಿತಿ ಅರ್ಹತೆಗಳು
ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top