fbpx
ಸಮಾಚಾರ

ತೆರೆಮೇಲೆ ಕನ್ನಡಿಗನಾಗಿ ನಟಿಸಲಿರುವ ಬಾಲಿವುಡ್ ನಟ ಶಾಹಿದ್​ ಕಪೂರ್​?

ಬಾಲಿವುಡ್​ ನಟ ಶಾಹಿದ್​ ಕಪೂರ್​ ಕನ್ನಡಿಗನಾಗಿ ತೆರೆಮೇಲೆ ಮಿಂಚಲಿದ್ದಾರೆ ಎಂಬ ಸುದ್ದಿಯೊಂದು ಸಿನಿವಲಯದಲ್ಲಿ ಹರಿದಾಡುತ್ತಿದೆ. ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಜೀವನಾಧಾರಿತ ಚಿತ್ರ ಈಗಾಗಲೇ ತಮಿಳಿನಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು ನಟ ಸೂರ್ಯ ಸಿನಿಮಾದ ನಾಯಕನಾಗಿ ನಟಿಸಿದ್ದಾರೆ..

ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಜೀವನಾಧಾರಿತ ತಮಿಳು ನಟ ಸೂರ್ಯ ಅವರ ‘ಸೂರರೈ ಪೊಟ್ಟರು’ ಸಿನಿಮಾವನ್ನು ಶಾಹೀದ್ ಕಪೂರ್ ರಿಮೇಕ್ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳ ರಿಮೇಕ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶಾಹಿದ್, ಸದ್ಯ ಕ್ಯಾಪ್ಟನ್ ಗೋಪಿನಾಥ್ ಆಗಿ ಮತ್ತೊಂದು ರಿಮೇಕ್ ಸಿನಿಮಾದಲ್ಲಿ ಬಣ್ಣಹಚ್ಚುವ ಸಾಧ್ಯತೆ ಇದೆ.

 

 

ಹಾಸನದ ಗೊರೂರಿನವರಾದ ಜಿ ಆರ್ ಗೋಪಿನಾಥ್ ಅವರ ಕುರಿತ ಸಿನಿಮಾವೇ ‘ಸೂರರೈ ಪೊಟ್ಟರು’. ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಗೋಪಿನಾಥ್‌, ಅಲ್ಲಿಂದ ಬಂದ ಮೇಲೆ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ. ಆಮೇಲೆ ಅವರು ‘ಏರ್ ಡೆಕ್ಕನ್’ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿ, ಕಡಿಮೆ ಹಣದಲ್ಲಿ ವಿಮಾನಯಾನ ಮಾಡುವ ಅವಕಾಶ ಕಲ್ಪಿಸುತ್ತಾರೆ. ಇದು ಅನೇಕರಿಗೆ ಸ್ಫೂರ್ತಿಯಾಗುತ್ತದೆ. ಈ ಕಥಾಹಂದರದ ಮೇಲೆ ಮೂಡಿ ಬರುತ್ತಿರುವ ‘ಸೂರರೈ ಪೊಟ್ಟರು’ ಸಿನಿಮಾ ಬಿಡುಗಡೆಗೆ ತಯಾರಿದ್ದು ಲಾಕ್ ಡೌನ್ ಕಾರಣ ತೆರೆಕಂಡಿಲ್ಲ. ಜಿ.ಆರ್ ಗೋಪಿನಾಥ್ ಅವರ ಜೀವನದ ರೋಚಕ ಕಥೆಯೆ ಸಿನಿಮಾ ರೂಪದಲ್ಲಿ ನೋಡಲು ಪ್ರೇಕ್ಷಕರು ಕಾತರರಾಗಿದ್ದರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top