fbpx
ಸಮಾಚಾರ

ಕೋವಿಡ್ ಔಷದಿ: ಬಾಬಾ ರಾಮದೇವ್‌ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಯೋಗಗುರು ಬಾಬಾ ರಾಮದೇವ್‌ ಅವರ ಪತಂಜಲಿ ಸಂಸ್ಥೆಯ ಕೊರೋನಿಲ್‌ ಕಿಟ್‌ಗೆ ಕೇಂದ್ರ ಆಯುಷ್‌ ಸಚಿವಾಲಯ ಬ್ರೇಕ್‌ ಹಾಕಿದ ಬೆನ್ನಲ್ಲೇ ಯೋಗಗುರು ರಾಮ್‌ದೇವ್‌ ಹಾಗೂ ಪತಂಜಲಿ ಆಯುರ್ವೇದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಬಿಹಾರ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ‌

ಸಾಮಾಜಿಕ ಕಾರ್ಯಕರ್ತರೊಬ್ಬರು, ಪತಂಜಲಿ ಸಂಸ್ಥೆ ಈ ರೀತಿ ಹೇಳುವುದರ ಮೂಲಕ ಜನರನ್ನು ಅಪಾಯಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಜೂನ್ 30ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಕೊರೊನಿಲ್ ಮಾತ್ರೆಗಳು ಕೊವಿಡ್ 19 ಸೋಂಕು ತೊಲಗಿಸುತ್ತದೆ ಎಂದು ಪ್ರಚಾರ ನೀಡಿರುವುದು ತಪ್ಪು ಸಂದೇಶ ನೀಡುತ್ತದೆ, ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ದೂರುದಾರ ಹೇಳಿದ್ದಾರೆ.

ಪತಂಜಲಿಗೆ ಆಯುಷ್ ಇಲಾಖೆ ನೋಟಿಸ್
ಅಂದಹಾಗೆ ಕೋವಿಡ್-19 ಸೋಂಕಿಗೆ ಯೋಗಗುರು ಬಾಬಾ ರಾಮ್‍ದೇವ್ ಅವರ ಪತಂಜಲಿ ಸಂಸ್ಥೆ ಆಯುರ್ವೇದ ಔಷಧಿಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಆಯುಷ್ ಸಚಿವಾಲಯ ಬ್ರೇಕ್ ಹಾಕಿದ್ದು, ಈ ಕುರಿತು ಜಾಹೀರಾತು ಪ್ರಸಾರ ನಿಲ್ಲಿಸುವಂತೆ ಹೇಳಿದೆ. ಅಲ್ಲದೇ ಔಷಧಿಯ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಪತಂಜಲಿ ಸಂಸ್ಥೆಗೆ ಸೂಚನೆ ನೀಡಿತ್ತು.

‘ಕೋವಿಡ್‌–19 ಗುಣಪಡಿಸಲಿದೆ ಎಂದು ಹೇಳಿಕೊಂಡಿರುವ ಔಷಧ ವಿವರಗಳನ್ನು ಆದಷ್ಟು ಬೇಗ ಕೊಡಬೇಕು ಹಾಗೂ ಪರಿಶೀಲನೆಯವರೆಗೂ ಈ ಉತ್ಪನ್ನ ಕುರಿತು ಜಾಹೀರಾತು ನೀಡಬಾರದು’ ಎಂದು ಪತಂಜಲಿ ಸಂಸ್ಥೆಗೆ ಆಯುಷ್‌ ಸಚಿವಾಲಯ ತಾಕೀತು ಮಾಡಿದೆ. ಕೊರೊನಿಲ್‌ ಮತ್ತು ಸ್ವಸರಿ ಔಷಧ ಬಿಡುಗಡೆ ಮಾಡಿದ್ದ ಪತಂಜಲಿ, ಇದು ಕೋವಿಡ್ ಗುಣಪಡಿಸಲಿದೆ ಎಂದು ಹೇಳಿತ್ತು. ಆದರೆ ಸಚಿವಾಲಯ, ‘ಈ ಪ್ರತಿಪಾದನೆಯ ಹಿಂದಿನ ವಿವರ ಹಾಗೂ ವೈಜ್ಞಾನಿಕ ಅಧ್ಯಯನದ ಮಾಹಿತಿ ಇಲ್ಲ’ ಎಂದು ಆಯುಷ್‌ ಸಚಿವಾಲಯ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top