fbpx
ಸಮಾಚಾರ

“ಇಂಥಾ ಕೆಟ್ಟ ಪ್ರಪಂಚದಲ್ಲಿ ನಾನು ಇರೋದಿಲ್ಲ, ಹೋಗುತ್ತೇನೆ!” ಶಾಕ್‌ ಕೊಟ್ಟ KGF ಗಾಯಕಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್‌ನಲ್ಲಿ ಕೇಳುಬರುತ್ತಿರುವ ‘ಸ್ವಜನಪಕ್ಷಪಾತ‘ ಚರ್ಚೆಯ ಬಿಸಿ ಸ್ಟಾರ್‌ ಕಿಡ್‌ಗಳಿಗೆ ತಟ್ಟಿದೆ. ‘ಸ್ಟಾರ್‌ ಕಿಡ್‌‘ಗಳನ್ನೇ ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆರೋಪಗಳು ಕೇಳುತ್ತಿದ್ದಂತೆ ಸ್ಟಾರ್‌ ನಟರು ಸಾಮಾಜಿಕ ಜಾಲತಾಣದಿಂದ ಹೊರಬರುತ್ತಿದ್ದಾರೆ.

ಹೀಗೆ ತಮ್ಮ ವಿರುದ್ಧದ ಟ್ರೋಲಿಂಗ್‌ ಮತ್ತು ನಕಾರಾತ್ಮಕ ಅಭಿಪ್ರಾಯಗಳಿಗೆ ಬೇಸತ್ತು ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಿಷ್ಕ್ರಿಯಗೊಳಿಸಿದ ಪಟ್ಟಿಯಲ್ಲಿ ಮೊದಲಿಗರಾಗಿದ್ದವರು ಬಾಲಿವುಡ್‌ನಟಿ ಸೋನಾಕ್ಷಿ ಸಿನ್ಹಾ. ಇದೀಗ ಬಾಲಿವುಡ್‌ನ ಮತ್ತೊಬ್ಬ ಸೆಲೆಬ್ರಿಟಿ, ಖ್ಯಾತ ಗಾಯಕಿ ನೇಹಾ ಕಕ್ಕರ್‌ ಕೂಡ ಸಾಮಾಜಿಕ ಜಾಲತಾಣಕ್ಕೆ ಗುಡ್‌ಬೈ ಹೇಳಿದ್ದಾರೆ. ಕೆಜಿಎಫ್ ಹಾಡು ಹಾಡಿದ ಖ್ಯಾತ ಗಾಯಕಿ ನೇಹಾ ಕಕ್ಕರ್ ಇಂಥ ಪ್ರಪಂಚದಲ್ಲಿ ನಾನಿರಲ್ಲ ಹೋಗುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಪೋಸ್ಟ್​​ ಹಾಕಿರುವ ನೇಹಾ ಕಕ್ಕರ್, ನಿದ್ರೆ ಮಾಡುತ್ತೇನೆ! ಉತ್ತಮ ಜಗತ್ತು ಇದ್ದಾಗ ದಯಮಾಡಿ ನನ್ನನ್ನು ಎಚ್ಚರಗೊಳಿಸಿ. ಈ ಜಗತ್ತಿನಲ್ಲಿ ಸ್ವಾತಂತ್ರ್ಯ, ಪ್ರೀತಿ, ಗೌರವ, ಕಾಳಜಿ, ಇರುವ ಒಳ್ಳೆಯ ಜನರಿದ್ದಾರೆ. ಹಾಗಾಗಿ ದ್ವೇಷ, ನೆಪೋಟಿಸಂ, ಅಸೂಯೆ, ಹೊಟ್ಟೆ ಕಿಚ್ಚು, ಹಿಟ್ಲರ್​, ಆತ್ಮಹತ್ಯೆ, ಕೆಟ್ಟ ಜನರು, ಇಂತವುಗಳಿಂದ ದೂರವಿರಲು ಬಯಸುತ್ತಿದ್ದೇನೆ. ಗುಡ್​ ನೈಟ್​​!!. ಚಿಂತಿಸಬೇಡಿ ನಾನು ಸಾಯುತ್ತಿಲ್ಲ. ಒಂದೆರಡು ದಿನಗಳವರೆಗೆ ನಾನು ದೂರ ಹೋಗುತ್ತಿದ್ದೇನೆ ಎಂದು ಬರೆದು ಹಾಕಿದ್ದಾರೆ.

ಅಷ್ಟಕ್ಕೂ ನೇಹಾ ದೂರ ಹೋಗುತ್ತೇನೆ ಎಂದಿದ್ದು ಯಾವ ವಿಚಾರದಲ್ಲಿ? ಸದ್ಯಕ್ಕೆ ಅವರು ಸೋಶಿಯಲ್‌ ಮೀಡಿಯಾದಿಂದ ದೂರ ಉಳಿಯಬೇಕು ಎಂದುಕೊಂಡಿದ್ದಾರಂತೆ. ‘ಇದರಿಂದ ಯಾರಿಗಾದರೂ ಬೇಜಾರು ಆಗಿದ್ದರೆ ನನ್ನನ್ನು ಕ್ಷಮಿಸಿ. ಬಹಳ ದಿನಗಳಿಂದ ನನಗೆ ಹೀಗೆ ಅನಿಸುತ್ತಿತ್ತು. ಆದರೆ ಹೇಳಿಕೊಳ್ಳಲು ಸಾಧ್ಯ ಆಗಿರಲಿಲ್ಲ. ಖುಷಿ ಆಗಿರಬೇಕು ಎಂದುಕೊಂಡರೂ ಅದು ಈಡೇರುತ್ತಿರಲಿಲ್ಲ. ನಾನು ಕೂಡ ಮನುಷ್ಯಳು. ತುಂಬ ಭಾವುಕ ವ್ಯಕ್ತಿ ಕೂಡ ಹೌದು. ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು ನನಗೆ ನೋವುಂಟು ಮಾಡಿವೆ’ ಎಂದು ಹೇಳಿರುವ ನೇಹಾ ಸದ್ಯಕ್ಕೆ ಇನ್‌ಸ್ಟಾಗ್ರಾಮ್‌ ಖಾತೆ ನಿಷ್ಕ್ರಿಯಗೊಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top