fbpx
ಸಮಾಚಾರ

ಪತಿ ನೆನಪಲ್ಲೇ ಹೆಸರು ಬದಲಿಸಿಕೊಂಡ ಮೇಘನಾ ರಾಜ್

ನಟ ಚಿರಜೀವಿ ಸರ್ಜಾ ನಿಧನ ಇಡೀ ಸ್ಯಾಂಡಲ್‌ವುಡ್‌ಗೆ ಶಾಕ್‌ ನೀಡಿತು. ಸರ್ಜಾ ಕುಟುಂಬಕ್ಕೆ ಇದು ಎಂದೂ ಮರೆಯದ ನೋವಿನ ಸಂಗತಿ. ಇನ್ನು, ಚಿರಂಜೀವಿ ಪತ್ನಿ ಮೇಘನಾ ರಾಜ್‌ ಅವರ ಪರಿಸ್ಥಿತಿ ನೋಡಿದರೆ ಎಂಥವರಿಗೂ ಕಣ್ಣೀರು ಬರುತ್ತದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಗಲೇ ಅವರಿಗೆ ಈ ರೀತಿ ಆಗಿದ್ದಕ್ಕೆ ಆ ವಿಧಿಯನ್ನೇ ಶಪಿಸಬೇಕು.

ಚಿರು ನಿಧನನದ ನಂತರ ಸಂಪೂರ್ಣ ಮೌನಕ್ಕೆ ಜಾರಿದರು ಮೇಘನಾ. ಮೊನ್ನೆಯಷ್ಟೇ ಚಿರು ನೆನಪಿನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಅವರೊಂದು ಪೋಸ್ಟ್‌ ಹಾಕಿದ್ದರು. ಪತಿ ಚಿರುಗೆ ಪತ್ರ ಬರೆಯುವ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದರು ಮೇಘನಾ ಬರೆದಿರುವ ಈ ಭಾವುಕ ಪತ್ರ ವೈರಲ್ ಆಗಿತ್ತು. ಇಷ್ಟೆಲ್ಲಾ ನೋವಿನ ನಡುವೆ ಚಿರು ಪತ್ನಿ ಮೇಘನಾ ತಮ್ಮ ಹೆಸರನ್ನೂ ಬದಲಿಸಿಕೊಂಡಿದ್ದಾರೆ.

 

 

‌ ಹೌದು, ಮೇಘನಾ ರಾಜ್ ಅವರು ತಮ್ಮ ಹೆಸರನ್ನೂ ಬದಲಿಸಿಕೊಂಡಿದ್ದಾರೆ. ಚಿರು ನೆನಪಿನಲ್ಲಿ ಮೇಘನಾ ತಮ್ಮ ಸೋಷಿಯಲ್ ಮೀಎಡಿಯದಲ್ಲಿ ಹೆಸರನ್ನು ಅಪ್ಡೇಟ್ ಮಾಡಿದ್ದಾರೆ. ಇಷ್ಟು ದಿನ ಕೇವಲ ‘ಮೇಘನಾ ರಾಜ್’ ಎಂದು ಮಾತ್ರ ಇದ್ದ ಹೆಸರನ್ನು ಈಗ ‘ಮೇಘನಾ ರಾಜ್ ಸರ್ಜಾ’ ಎಂದು ಬದಲಿಸಿಕೊಂಡಿದ್ದಾರೆ. ಇನ್ನು ಅವರ ಇನ್ಸ್​​ಟಾಗ್ರಾಂ ಖಾತೆಯಲ್ಲಿ ‘ಮೇಘ ಎಸ್ ರಾಜ್’ ಎಂದು ಇತ್ತು. ಅದು ಕೂಡ ಈಗ ‘ಮೇಘನಾ ರಾಜ್ ಸರ್ಜಾ’ ಎಂದು ಬದಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top