fbpx
ಸಮಾಚಾರ

ವಿದೇಶಗಳಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು ಹಾಗು ನಾಗರಿಕರನ್ನು ತಾಯ್ನಾಡಿಗೆ ಕರೆತರಲು ಸಂಸದ ಜಿಸಿ ಚಂದ್ರಶೇಖರ್ ನಿರ್ಧಾರ

ರಾಜ್ಯಸಭಾ ಸಂಸದರರಾದ ಸನ್ಮಾನ್ಯ ಜಿ.ಸಿ ಚಂದ್ರಶೇಖರ್ ರವರು ವಿದೇಶಾಂಗ ವ್ಯವಹಾರ ಸಮಿತಿಯ ಸದಸ್ಯರಾಗಿದ್ದು ತಮ್ಮ ಗಮನಕ್ಕೆ ಆನ್ಲೈನ್ ಸೋಶಿಯಲ್ ಮೀಡಿಯಾ ಹಾಗು ಮಾಧ್ಯಮದಿಂದ ವಿದೇಶಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗು ಇತರೆ ನಾಗರಿಕರ ಮಾಹಿತಿ ತಿಳಿದ ಕೂಡಲೇ ಮರಳಿ ಭಾರತಕ್ಕೆ ಕರೆತರುವ ಸತತ ಪ್ರಯತ್ನವನ್ನು ಮಾಡಿದ್ದಾರೆ.

 

 

ಇದಕ್ಕೆ ಉದಾಹರಣೆಯಾಗಿ ಮಲೇಶಿಯಾದಲ್ಲಿ ಸಿಲುಕಿದ್ದ 97 ಮಂದಿಯನ್ನು ಭಾರತಕ್ಕೆ ಮರಳಿ ಕರೆತರಲು ಸಫಲರಾಗಿದ್ದಾರೆ

ಕೊರೋನ ವೈರಸ್ ಸೋಂಕಿನಿಂದಾಗಿ ಹೊರ ದೇಶಗಳಲ್ಲಿ ಅತಂತ್ರರಾಗಿರುವ ಕನ್ನಡಿಗರು ಭಾರತಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಹೊರ ದೇಶಗಳಲ್ಲಿನ ವಿದ್ಯಾರ್ಥಿಗಳು ಕೂಡಾ ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ವೀಡಿಯೋ ಮೂಲಕ ಸಂದೇಶ ಕಳುಹಿಸಿ ವಿನಂತಿಸಿಕೊಂಡಿದ್ದರು.

 

 

ಈ ಮದ್ಯೆ ಲಾಕ್ಡೌನ್ ಕಾರಣಕ್ಕೆ ಮಲೇಶಿಯಾದಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವಲ್ಲಿ ಸಂಸದ ಜಿಸಿ ಚಂದ್ರಶೇಖರ್ ನೆರವು ನೀಡಿದ್ದಾರೆ. “ಮೇಲೇಶಿಯಾದಲ್ಲಿ ಸಿಲುಕಿರುವವನ್ನು ಭಾರತಕ್ಕೆ ಕರೆತರುವಲ್ಲಿ ಕನ್ನಡಿಗರ ಕುರಿತು ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಅಧಿಕಾರಿಗಳನ್ನು ವಿಚಾರಿಸಿದಾಗ ಇನ್ನೊಂದು ತಿಂಗಳು ಬೇರೆ ವಿಮಾನ ಇಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.” ಎಂದು ಮಲೇಷಿಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು

 

 

ಈ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದ ಸಂಸದ ಜಿಸಿ ಚಂದ್ರಶೇಖರ್ ಮಲೇಷಿಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ, ಮತ್ತು ಕೇಂದ್ರ ಸಚಿವ ಜೈಶಂಕರ್ ಅವರ ಬಳಿ ಮನವಿ ಮಾಡಿಕೊಂಡಿದ್ದರು.

 

 

ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ಮಲೇಷಿಯಾದಲ್ಲಿ ಸಿಲುಕಿರುವ ಕನ್ನಡಿಗ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಿದೆ. ಅದರಂತೆ ಮಲೇಷಿಯಾದಲ್ಲಿ ಸಿಲುಕಿರುವ ಕನ್ನಡಿಗ ವಿದ್ಯಾರ್ಥಿಗಳನ್ನು ಸೇರಿ ಒಟ್ಟು 97 ಮಂದಿಯನ್ನು ಭಾರತಕ್ಕೆ ಕರೆತರಲು ಮೇ 20ರಂದು ವಿಮಾನವನ್ನು ವ್ಯವಸ್ಥೆ ಮಾಡಿತು.ವಿದೇಶದಿಂದ ಮರಳಿದ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿರುವುದನ್ನು ಸಹ ಲಗುತ್ತಿಸಲಾಗಿದೆ

 

 

2 . ರಷ್ಯಾದಲ್ಲಿ ಸಿಲುಕಿದ್ದ ವೈದ್ಯಕೀಯ ವಿದ್ಯಾರ್ಥಿ ಲಲಿತಾ ಕುಮಾರಿ ಮುರಳೀಧರ್ ಮನೋಹರ್ ಎಂಬುವವರು ಕೋವಿಡ್ ಲಾಕ್ ಡೌನ್ ನಿಂದಾಗಿ ಸತತ ಪ್ರಯತ್ನ ನಡೆಸಿದರು ಸಹ ಮರಳಿ ಕರ್ನಾಟಕದ ತಮ್ಮ ಮನೆಗೆ ಮರಳಿ ಬರಲು ಸಾಧ್ಯವಾಗಿರಲಿಲ್ಲ ಈ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾದಲ್ಲಿರುವ ದೂತಾವಾಸ ಕಚೇರಿ ಹಾಗು ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ.ಸುಬ್ರಮಣ್ಯ ಜೈ ಶಂಕರ್ ರವರಿಗೆ ಪತ್ರ ಬರೆದು ಆಗ್ರಹಿಸಿದರು

 

 

ಸನ್ಮಾನ್ಯ ಜಿ.ಸಿ ಚಂದ್ರಶೇಖರ್ ರವರು ವಿದೇಶಾಂಗ ವ್ಯವಹಾರ ಸಮಿತಿಯ ಸದಸ್ಯರಾಗಿರುವುದರಿಂದ ಅವರ ಗಮನಕ್ಕೆ ಮಾಧ್ಯಮ ಮುಖೇನ ಅಥವಾ ಯಾರೇ ಅವರ ಗಮನಕ್ಕೆ ತಂದರು ಅವರ ಕೈಲಾದ ಮಟ್ಟಿಗೆ ಕನ್ನಡಿಗರನ್ನು ಸ್ವದೇಶಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top