fbpx
ಸಮಾಚಾರ

ಮೇಘನಾ ರಾಜ್ ಮನೆಗೆ ತೆರಳಿ ಸಾಂತ್ವನ ಹೇಳಿದ ಸಿದ್ಧರಾಮಯ್ಯ ಸೊಸೆ

ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರನ್ನು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ಭೇಟಿ ಮಾಡಿ ಸಾಂತ್ವನ ಹೇಳಿದರು.

ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಇನ್ನೂ ಮನಸ್ಸಿನಿಂದ ದೂರಾಗಿಲ್ಲ. ಗರ್ಭಿಣಿ ಮೇಘನಾ ಸದ್ಯ ಅಮ್ಮನ ಮನೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಸ್ನೇಹಿತರು ಹಾಗೂ ಹಿತೈಶಿಗಳ ಒಂದೊಳ್ಳೆ ಮಾತು ಅವರ ಮನಸ್ಸಿಗೆ ಹಿತ ನೀಡಬಹುದು. ಇದೇ ಕಾರಣದಿಂದ ನಟ ಪ್ರಥಮ್ ಹಾಗೂ ಸಿದ್ಧರಾಮಯ್ಯನವರ ಸೊಸೆ ಸ್ಮಿತಾ ಮೇಘನಾ ರಾಜ್​ ಅವರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ.

 

 

ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಮೊದಲ ಬಾರಿಗೆ ಮೇಘನಾ ಮನೆಯಲ್ಲಿ ಕಾಣಿಸಿಕೊಂಡು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮೇಘನಾ ರಾಜ್ ಕುಟುಂಬ ಮತ್ತು ಸಿದ್ದರಾಮಯ್ಯನವರ ಕುಟುಂಬದ ನಡುವೆ ಉತ್ತಮ ಒಡನಾಟವಿದೆ. ಇದೆ ಸ್ನೇಹದ ಕಾರಣ ಸ್ಮಿತಾ, ಮೇಘನಾ ಮನೆಗೆ ಭೇಟಿ ನೀಡಿ ಮೇಘನಾ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಕೆಲ ಹೊತ್ತು ಮೇಘನಾ ಜೊತೆ ಸಮಯಕಳೆದಿದ್ದಾರೆ.

ಪ್ರಥಮ್ ಪೋಸ್ಟ್:
“ಭೇಟಿಯ ಬಗ್ಗೆ ಅನಾವಶ್ಯಕ ಕಲ್ಪನೆ ಬೇಡ. ಒಂದು ವಿಶೇಷ ಮನವಿ. ಸಂಬಂಧವೇ ಇರದ ಗಾಸಿಪ್ ಗಳು, ಇಲ್ಲಸಲ್ಲದ ವಿಚಾರ ಯೂಟ್ಯೂಬ್ ನಲ್ಲಿ ಹಾಕೋ ಮುಂಚೆ ಒಂದು ಸಲ ಮೇಘನಾ ರಾಜ್ ಬಗ್ಗೆ ಯೋಚಿಸಿ. ಮೇಘನಾ ಅವರ ಭಾವನೆಗಳನ್ನು ಗೌರವಿಸಿ. ಎಲ್ಲಿಯೂ ಮಾತನಾಡದ ಸ್ಮಿತಾ ಮೇಡಮ್ ಬಹಳಷ್ಟು ವಿಚಾರಗಳನ್ನು ಅಕ್ಕನ ಜಾಗದಲ್ಲಿ ನಿಂತು ಮೇಘನಾರ ಜೊತೆ ಮಾತನಾಡಿದ್ದಾರೆ. ಮಗುವಿನ ಬಗ್ಗೆ ಬಹಳಷ್ಟು ಕನಸು ಕಂಡಿದ್ದಾರೆ. ಅವರ ಎಲ್ಲಾ ಆಸೆಗಳು ಈಡೇರಲೆಂದು ಸ್ವಚ್ಚ ಮನಸ್ಸಿನಿಂದ ಹಾರೈಸೋಣ” ಎಂದು ಪ್ರಥಮ್ ಫೋಟೋ ಶೇರ್ ದೀರ್ಘವಾಗಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top