fbpx
ಸಮಾಚಾರ

ಜೈನರ ಒತ್ತಡಕ್ಕೆ ಮಣಿದು ಬೇಷರತ್ ಕ್ಷಮೆಯಾಚಿಸಿ ಮೂರ್ತಿಯನ್ನು ಹಸ್ತಾಂತರಿಸಿದ ಚೀನಾ ಒಡನಾಟವಿರುವ ಲಾಸ್ ವೇಗಸ್ ಕ್ಲಬ್

ಜೈನರು ಪೂಜಿಸುವ ಪ್ರತಿಮೆಗಳು ಕ್ಲಬ್ ನಲ್ಲಿ ಇಡುವುದು ಸೂಕ್ತವಲ್ಲ ಎಂದು ಧಾರ್ಮಿಕ ಮುಖಂಡರು ತೀವ್ರ ವಿರೋಧ ವ್ಯಕ್ತಡಿಸಿದ ನಂತರ ಎಚ್ಚೆತ್ತುಕೊಂಡಿರುವ ಲಾಸ್ ವೇಗಾಸ್ ನ ಮಾಂಡಲೆ ಕೊಲ್ಲಿಯ ಚೀನಾ ಒಡೆನಾಟವಿರುವ ಕ್ಯಾಸಿನೊ ಒಂದರ ಜೂಜಿನ ಕೋಣೆಯಿಂದ ಮಹಾವೀರ ಮೂರ್ತಿಯನ್ನು ತೆಗೆಯುವುದಾಗಿ ಘೋಷಿಸಿತು. ಅಲ್ಲದೆ ತಮ್ಮಿಂದ ಆಗಿರುವ ತಪ್ಪಿಗೆ ಜೈನ ಧರ್ಮೀಯರ ಬಳಿ ಕ್ಷಮೆಯನ್ನು ಕೇಳಿದೆ.

 

 

ಮಂಗಳವಾರ ಹೇಳಿಕೆಯಲ್ಲಿ, ಕ್ರಿಶ್ಚಿಯನ್, ಹಿಂದೂ, ಬೌದ್ಧ, ಯಹೂದಿ ಮತ್ತು ಜೈನ ಧಾರ್ಮಿಕ ಮುಖಂಡರು ವಿವಿಧ ಜೈನ ದೇವತೆಗಳ ಪ್ರತಿಮೆಗಳನ್ನು ಸ್ಥಳದಿಂದ ತೆಗೆದುಹಾಕುವಂತೆ ಕೆಸಿನೋ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದರು. ಕ್ಯಾಸಿನೊ ನೈಟ್-ಕ್ಲಬ್ ಅನ್ನು ಅಲಂಕರಿಸಲು ಹೆಚ್ಚು ಪೂಜ್ಯ ಜೈನ ದೇವತೆಗಳ ವಿಗ್ರಹಗಳನ್ನು ಇಟ್ಟಿರುವುದು ಬಹಳ ಅಗೌರವಕಾರಿ ಮತ್ತು ಈ ನಂಬಿಕೆಗಳ ಅನುಯಾಯಿಗಳಿಗೆ ತೊಂದರೆಯಾಗುತ್ತದೆ. ಈ ಕೂಡಲೇ ಅಲ್ಲಿಂದ ವಿಗ್ರಹಗಳನ್ನು ತೆಗೆಯಬೇಕು ಮತ್ತು ಜೈನ ಧರ್ಮದ ನಂಬಿಕೆಗಳಿಗೆ ಅಪಮಾನ ಮಾಡಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಧಾರ್ಮಿಕ ಮುಖಂಡರು ತಮ್ಮ ಜಂಟಿ ಹೇಳಿಕೆಯಲ್ಲಿ ಅಸಮಾಧಾನ ಹೊರಹಾಕಿದ್ದರು.

ಇದರಿಂದ ಎಚ್ಚೆತ್ತುಕೊಂಡಿರುವ ಲಾಸ್ ವೇಗಾಸ್ ನ ಮಾಂಡಲೆ ಕೊಲ್ಲಿಯ ಕೆಸಿಯೋ ಕ್ಲಬ್ ರೂಮ್ ನಿಂದ ಜೈನ ಪ್ರತಿಮೆಗಳನ್ನು ತೆಗೆದುಹಾಕುವುದಾಗಿ ಹೇಳಿದೆ ಅಲ್ಲದೆ ತಮ್ಮಿಂದ ಆಗಿರುವ ತಪ್ಪಿನಿಂದ ಯಾರಿಗಾದರೂ ಮನಸ್ಸಿಗೆ ಬೇಸರವಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದೆ.

 

 

“ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಫೌಂಡೇಶನ್ ರೂಮ್‌ನ ಪ್ರೀತಿ, ಶಾಂತಿ, ಸತ್ಯ, ಸದಾಚಾರ ಮತ್ತು ಅಹಿಂಸೆಯ ಮೂಲಕ ಜನಾಂಗೀಯ ಮತ್ತು ಆಧ್ಯಾತ್ಮಿಕ ಸಾಮರಸ್ಯವನ್ನು ಉತ್ತೇಜಿಸುವ ಸಂಪ್ರದಾಯವು ಎಂದಿಗಿಂತಲೂ ಮುಖ್ಯವಾಗಿದೆ. ಇತ್ತೀಚಿನ ಪೋಟೋಗಳಿಂದ ಮನನೊಂದವರಿಗೆ ನಾವು ತೀವ್ರವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ ಅಂತಹ ಸೂಕ್ಷ್ಮವಲ್ಲದ ಚಿತ್ರಣಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುತ್ತೇವೆ. ನಿರ್ದಿಷ್ಟವಾಗಿ, ನಾವು ಮಹಾವೀರ ಪ್ರತಿಮೆಯನ್ನು ನಮ್ಮ ಆವರಣದಿಂದ ತೆಗೆದುಹಾಕುತ್ತಿದ್ದೇವೆ.” ಎಂದು ತನ್ನ ಹೇಳಿಕೆಯಲ್ಲಿ ಕೆಸಿನೋ ಮಂಡಳಿ ಹೇಳಿದೆ.

ನಾವು ಈ ಕಾರ್ಯ ದಲ್ಲಿ ಸ್ಪಂದಿಸಿದ ಸರ್ವರಿಗೂ ಕೃತಜ್ಞತೆ ಶುಭಾಶೀರ್ವಾದ ತಿಳಿಸುತ್ತೇವೆ
–ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ
ಶ್ರೀ ದಿಗಂಬರ ಜೈನ ಮಠ
ಮೂಡುಬಿದಿರೆ, ದ. ಕ ಜಿಲ್ಲೆ ಕರ್ನಾಟಕ ರಾಜ್ಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top