fbpx
ಸಮಾಚಾರ

“ಹೇರ್ ಕಟ್ ಮಾಡಿಸಿದ ಮಾತ್ರಕ್ಕೆ ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದಲ್ಲ” ಮಾಧ್ಯಮಗಳ ವಿರುದ್ಧ ಸಿಂಧು ಲೋಕನಾಥ್ ಕಿಡಿ

ನಟಿ ಸಿಂಧು ಲೋಕನಾಥ್ ತಮ್ಮ ಫೇಸ್‌ಬುಕ್ ನಲ್ಲಿ ಒಂದಷ್ಟು ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಅದು ಮಾಧ್ಯಮದವರಿಗೆ ಎಂದು ವಿಶೇಷವಾಗಿ ಹೇಳಿದ್ದಾರೆ. ಈ ಫೋಟೋಗಳು ಮಾಧ್ಯಮದವರಿಗಾಗಿ. ನನಗೆ ಹುಷಾರಿಲ್ಲ ಎಂದು ಮಾಧ್ಯಮಗಳು ಹೇಳಿದ ಮೇಲೆ ತನಗೆ ಬಹಳಷ್ಟು ಜನ ಆರೋಗ್ಯ ವಿಚಾರಿಸಿ ಮೆಸೇಜ್ ಕಳುಹಿಸಿರುವುದಾಗಿ ಅವರು ಹೇಳಿದ್ದಾರೆ.

ಇತ್ತೀಚೆಗೆ ಸಿಂಧು ಲೋಕನಾಥ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬಾಯ್ ಹೇರ್ ಕಟ್ ಮಾಡಿಸಿಕೊಂಡಿರುವ ಫೋಟೋ ಹಾಕಿ ಕೆಲ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು. ಇದನ್ನು ನೋಡಿದ ಕೆಲವು ಸುದ್ದಿ ಮಾಧ್ಯಮಗಳು ಸಿಂಧು ಖಿನ್ನತೆಗೆ ಒಳಗಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.

ಈಗ ಈ ವಿಚಾರವಾಗಿ ಮತ್ತೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ ಸುದ್ದಿ ಮಾಧ್ಯಮಗಳಿಗೆ ಮುಖಕ್ಕೆ ಹೊಡೆದ ಹಾಗೆ ಉತ್ತರ ಕೊಟ್ಟಿದ್ದಾರೆ. “ನಾನು ಕೂದಲನ್ನು ಕತ್ತರಿಸಿದ್ದೇನೆ ಎಂದರೆ ಅದರ ಅರ್ಥ ನಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಅಥವಾ ನಾನು ಖಿನ್ನತೆ ಒಳಗಾಗಿದ್ದೇನೆ” ಎಂಬ ಅರ್ಥವಲ್ಲ. ನಾನು ಬೇರೆ ರೀತಿಯ ಹೇರ್ ಸ್ಟೈಲ್ ಮಾಡಲು ಇಷ್ಟಪಡುತ್ತೇನೆ ಅದಕ್ಕೆ ಬಾಯ್ ಕಟ್ ಮಾಡಿಸಿದ್ದೇನೆ ಎಂದಿದ್ದಾರೆ.

 

 

ನನ್ನ ಕತ್ತರಿಸಿದ ಕೂದಲ ಮೇಲೆ ವಿವಾದವನ್ನು ಹುಟ್ಟು ಹಾಕಿದವರಿಗೆ ನಾನು ಹೇಳುವುದೆನೆಂದರೆ. ನನ್ನ ಕೂದಲು ಮೊದಲಿಗಿಂತಲೂ ತುಂಬ ಚೆನ್ನಾಗಿ ಬೆಳೆಯುತ್ತದೆ. ನಾನು ಹಿಂದೆ ಹಾಕಿರುವ ಪೋಸ್ಟ್ ಅನ್ನು 10 ಬಾರಿ ಸರಿಯಾಗಿ ಓದಿ, ಆಗ ನಿಮಗೆ ನಾನು ಏನನ್ನು ಬರೆದಿದ್ದೇನೆ ಎಂಬುದು ಅರ್ಥವಾಗುತ್ತದೆ. ನಿಮ್ಮ ಒಂದು ಉಪಯೋಗಕ್ಕಾಗಿ ಬೇರೆಯವರನ್ನು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಖಿನ್ನತೆಗೆ ಒಳಗಾಗಿದ್ದಾರೆ ಎಂದು ಇನ್ನೊಬ್ಬರ ವೈಯಕ್ತಿಕ ಜೀವನಕ್ಕೆ ತಲೆ ಹಾಕಬೇಡಿ. ಅದು ಅವರ ಹೆಸರನ್ನು ಹಾಳು ಮಾಡುತ್ತದೆ ಎಂದು ಸಿಂಧು ತಿಳಿಸಿದ್ದಾರೆ.

ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ವ್ಯಕ್ತಿಗಳನ್ನು ಖಿನ್ನತೆಯ ಕಡೆಗೆ ತಳ್ಳುವುದನ್ನು ಬಿಡಿ. ನಾನು ಸುಮ್ಮನಿದ್ದೇನೆ ಎಂದು ನೀವು ನನ್ನ ಬಗ್ಗೆ ಸುಳ್ಳು ಸುದ್ದಿ ಮಾಡುವ ಸ್ವಾತಂತ್ರ್ಯವನ್ನು ತೆಗೆದುಕೊಂಡರೆ, ಅದರ ವಿರುದ್ಧ ಧ್ವನಿ ಎತ್ತುವ ಸ್ವಾಂತತ್ರ್ಯ ನನಗೂ ಇದೆ. ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಸಿಂಧು ಖಾರವಾಗಿ ಪೋಸ್ಟ್ ಹಾಕಿದ್ದಾರೆ.

ಈ ಸಂಕಷ್ಟದ ಸಮಯದಲ್ಲಿ ಈ ರೀತಿ ಮಾಡುವುದನ್ನು ನಿಲ್ಲಿಸಿ. ಜನರನ್ನು ಅವರ ಬದುಕಿನ ಕೊನೆಯ ಹಂತಕ್ಕೆ ತಂದು ನಿಲ್ಲಿಸುವನ್ನು ನಿಲ್ಲಿಸಿ. ನಾನು ಇಷ್ಟಕ್ಕೇ ನಿಲ್ಲಿಸುತ್ತಿದ್ದೇನೆ. ನಿಮಗೆ ಬೇಕಾಬಿಟ್ಟಿ ಬರೆದುಹಾಕಬಹುದಾಗಿದ್ದರೆ, ನನಗೂ ಮಾತಾಡುವ ಸ್ವಾತಂತ್ರ್ಯವಿದೆ ಎಂದಿದ್ದಾರೆ. ನನ್ನ ಬಗ್ಗೆ ಕಾಳಜಿ ವಹಿಸಿ ನನ್ನ ಆರೋಗ್ಯ ವಿಚಾರಿಸಿದ ಎಲ್ಲರಿಗೂ ಥ್ಯಾಂಕ್ಯೂ.. ನಾನು ಚೆನ್ನಾಗಿದ್ದೇನೆ. ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಆವು ಪುಟ್ ಫಾಲ್ ಆಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top