fbpx
ಸಮಾಚಾರ

Amazonನಲ್ಲಿ 20000 ಉದ್ಯೋಗಾವಕಾಶಗಳು: ಕನ್ನಡಿಗರಿಗೂ ಕೆಲಸ

ಕೋವಿಡ್ 19 ವೈರಸ್ ಕಾರಣ ಬಹುತೇಕ ಎಲ್ಲಾ ಕಂಪನಿಗಳು ನಷ್ಟದಲ್ಲಿದೆ. ಹೀಗಾಗಿ ವೇತನ ಕಡಿತ, ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕೋಟ್ಯಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಉದ್ಯೋಗದ ಆತಂಕದಲ್ಲಿ ಜನ ದಿನ ಮುಂದೂಡುತ್ತಿರುವಾಗ ಅಮೇಜಾನ್ 20,000 ಮಂದಿಯನ್ನು ತಾತ್ಕಾಲಿಕ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ತನ್ನ ಸೇವೆಗಳನ್ನು ಅವಲಂಬಿಸಿರುವ ಜನರ ಬೇಡಿಕೆ ಪೂರೈಸುವ ಸಲುವಾಗಿ ವಿಶೇಷವಾಗಿ ಸಾರ್ವಜನಿಕ ಸೇವೆಯಿಂದ ಹೊರಗುಳಿದಿರುವವರಿಗಾಗಿ ಸುಮಾರು 50 ಸಾವಿರ ಕಾಲೋಚಿತ ಉದ್ಯೋಗವಕಾಶಗಳನ್ನು ಸೃಷ್ಠಿಸುವುದಾಗಿ ಅಮೆಜಾನ್ ಇಂಡಿಯಾ ಹೇಳಿತ್ತು. ಅದರಂತೆ ಇದೀಗ ಮೊದಲಿಗೆ ೨೦ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಅಮೆಜಾನ್‌ ತನ್ನ ವರ್ಚುವಲ್ ಕಸ್ಟಮರ್ ಸರ್ವೀಸ್ ಯೋಜನೆಯಡಿ ಈ ಹುದ್ದೆಗಳನ್ನು ಭರ್ತಿ ಮಾಡಲಿದೆ.

ಈ ಹುದ್ದೆಗಳಿಗೆ ಸೇರಿದ ಜನರು ಇ-ಮೇಲ್, ಚ್ಯಾಟ್, ಸೋಸಿಯಲ್ ಮೀಡಿಯಾ ಹಾಗೂ ಫೋನ್ ಗಳ ಮೂಲಕ ಗ್ರಾಹಕರಿಗೆ ಸಹಾಯ ಮಾಡಲಿದ್ದಾರೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 12 ನೇ ತರಗತಿ ಪಾಸಾಗಿರಬೇಕು. ಜೊತೆಗೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಅಥವಾ ಕನ್ನಡ ಭಾಷೆಗಳ ಮೇಲೆ ಪ್ರಭುತ್ವ ಹೊಂದಿರಬೇಕು. ನೇಮಕಾತಿ ನೋಯ್ಡಾ, ಕೋಲ್ಕತಾ, ಜೈಪುರ, ಚಂಡೀಗಢ, ಇಂದೋರ್, ಭೋಪಾಲ್, ಲಕ್ನೋ, ಹೈದರಾಬಾದ್, ಪುಣೆ, ಕೊಯಮತ್ತೂರು, ಮಂಗಳೂರಿಗೆ ಸೀಮಿತವಾಗಿರಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top