fbpx
ಸಮಾಚಾರ

ರಾಜಮಾರ್ತಾಂಡ ಚಿತ್ರಕ್ಕೆ ಧ್ರುವ ಸರ್ಜಾ ಜೊತೆಗೆ ಡಬ್ ಮಾಡಲಿದ್ದಾರೆ ಮತ್ತೊಬ್ಬ ಸ್ಟಾರ್ ನಟ; ಯಾರು ಗೊತ್ತೇ?

ಚಿರಂಜೀವಿ ಸರ್ಜಾ ಅಕಾಲಿಕ ಅಗಲಿಕೆಯಿಂದ ನೋವು ಇನ್ನೂ ಮಾಸಿಲ್ಲ. ಚಿತ್ರರಂಗ, ಕುಟುಂಬ ಅಮತ್ತು ಅಭಿಮಾನಿಗಳು ಚಿರು ಅವ್ರ ನೆನಪಲ್ಲೇ ಮುಳುಗಿದ್ದಾರೆ. ಈ ಮಧ್ಯೆ ಚಿರು ನಿಧನದಿಂದ ಕೆಲ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿರು ನಟಿಸುತ್ತಿದ್ದ ಅರ್ಧಕ್ಕೆ ನಿಂತಿರುವ ಸಿನಿಮಾಗಳ ಕಥೆಯೇನು ಅನ್ನೋ ಆಲೋಚನೆ ಶುರುವಾಗಿದೆ. ಚಿರು ನಟನೆಯ ಕೆಲ ಸಿನಿಮಾಗಳು ರಿಲೀಸ್​ಗೆ ಸಿದ್ಧವಾಗಿದ್ರೆ, ಮತ್ತೆ ಕೆಲವು ಚಿತ್ರಗಳ ಕೆಲಸಗಳು ಅರ್ಧಕ್ಕೆ ನಿಂತಿದೆ. ಈ ನಡುವೆ ಚಿರು ಅವರ ರಾಜಮಾರ್ತಾಂಡ ಚಿತ್ರಕ್ಕೆ ಧ್ರುವ ಸರ್ಜಾ ಅಣ್ಣನ ಪಾತ್ರದಕ್ಕೆ ಡಬ್​ ಮಾಡೋಕ್ಕೆ ಒಪ್ಪಿದ್ದಾರೆ.

ಈಗಾಗಲೇ ರಾಜಮಾರ್ತಾಂಡ ಚಿತ್ರಕ್ಕೆ ನಟ ಧ್ರುವ ಸರ್ಜಾ ಅವರು ಚಿರು ವಾಯ್ಸ್ ಡಬ್ ಮಾಡಲಿದ್ದಾರೆ ಎಂದು ಚಿತ್ರದ ನಿರ್ದೇಶಕ ರಾಮ್ ನಾರಾಯಣ್ ಅವರು ದೃಢಪಡಿಸಿದ್ದಾರೆ. ಇದರ ಜೊತೆಗೆ ಈ ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್ ನಟನ ಧ್ವನಿ ಕೂಡ ಇರಲಿದೆಯಂತೆ. ಹೌದು ಈ ಕುರಿತು ಖಾಸಗಿ ಜಾಲತಾಣವೊಂದಕ್ಕೆ ರಾಮ್​ ನಾರಾಯಣ್ ಮಾಹಿತಿ ನೀಡಿದ್ದಾರೆ.

 

 

ಚಿರು ಅವರ ಪಾತ್ರಕ್ಕೆ ಡಬ್ ಮಾಡಲು ಒಪ್ಪಿರುವ ಆ ಸ್ಟಾರ್ ನಟ ಮತ್ಯಾರು ಅಲ್ಲ. ಅದು ಜೊತೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್. ಹೌದು ದರ್ಶನ್​ ಕೂಡ ನೆರವಿನ ಹಸ್ತ ಚಾಚಿದ್ದು ಅಗತ್ಯ ಬಿದ್ದರೆ ಸ್ವತಃ ತಾವೇ ವಾಯ್ಸ್ ಡಬ್ ಮಾಡೋದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಚಿತ್ರದ ನಿರ್ದೇಶಕರು ಹೇಳಿದ್ದಾರೆ. ಮೊದಲಿಂದಲೂ ಸಿನಿಮಾಗೆ ಪಿಲ್ಲರ್ ಆಗಿ ನಿಂತಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವೇ ಸ್ವತಃ ಚಿರು ಕೊನೆಯ ಸಿನಿಮಾಗೆ ಧ್ವನಿ ಕೊಡೋದಾಗಿ ಮುಂದೆ ಬಂದಿದ್ದು ಇವರೆಲ್ಲರ ಧ್ವನಿಯಿಂದ ಚಿರಂಜೀವಿ ಸರ್ಜಾ ಆತ್ಮಕ್ಕೆ ಶಾಂತಿ ಸಿಕ್ಕೇ ಸಿಗುತ್ತದೆ ಅನ್ನೋ ವಿಶ್ವಾಸ ವ್ಯಕ್ತಪಡಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top