fbpx
ಸಮಾಚಾರ

ಹಿಂದೂಗಳ ಭಾವನೆಗೆ ಧಕ್ಕೆ: ‘ಕೃಷ್ಣಾ & ಹಿಸ್ ಲೀಲಾ’ ಬಹಿಷ್ಕರಿಸುವಂತೆ ಅಭಿಯಾನ

ನೆಟ್ ಫ್ಲಿಕ್ಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತದಲ್ಲಿ ನೆಟ್ ಫ್ಲಿಕ್ಸ್ಅನ್ನು ಬಹಿಷ್ಕರಿಸುವಂತೇ ಅಭಿಯಾನ ನಡೆಸಲಾಗುತ್ತಿದೆ. ‘ಬಾಯ್ಕಾಟ್ ನೆಟ್‌ಫ್ಲಿಕ್ಸ್’ ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಅಷ್ಟಕ್ಕೂ ಇದ್ದಕ್ಕಿದ್ದಂತೆ ನೆಟ್ ಫ್ಲಿಕ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಲು ಕಾರಣ ಏನು ಅಂತೀರಾ? ಇದಕ್ಕೆ ಕಾರಣ ತೆಲುಗಿನ ‘ಕೃಷ್ಣ ಆಂಡ್ ಹಿಸ್ ಲೀಲಾ’ ಚಿತ್ರ.

ಹೌದು, ನೆಟ್‌ಫ್ಲಿಕ್ಸ್‌ನಲ್ಲಿ ಇದೆ ಜೂನ್ 25ರಂದು ರಿಲೀಸ್ ಆಗಿದ್ದ ‘ಕೃಷ್ಣಾ & ಹಿಸ್ ಲೀಲಾ’ ಚಿತ್ರದ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಅವರೂ ಕೂಡ ನಟಿಸಿರುವ ಈ ಚಿತ್ರದಲ್ಲಿ ಹಿಂದೂ ಧರ್ಮದ ಅನುಯಾಯಿಗಳ ಭಾವನೆಗೆ ಧಕ್ಕೆ ಉಂಟುಮಾಡುವ ಸನ್ನಿವೇಶಗಳಿವೆ ಎಂದು ಆರೋಪಿಸಿದ್ದಾರೆ.

ಕೃಷ್ಣ ಹೆಸರಿನ ಪುರುಷ ಪಾತ್ರಧಾರಿ ಅನೇಕ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಚಿತ್ರಿಸಲಾಗಿದೆ. ರಾಧಾ ಹೆಸರಿನ ಪಾತ್ರದೊಂದಿಗೂನ ಕೃಷ್ಣ ಪಾತ್ರಧಾರಿ ದೈಹಿಕ ಸಂಪರ್ಕ ನಡೆಸುತ್ತಾನೆ. ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದ್ದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂಬ ಕೂಗು ಕೇಳಿ ಬಂದಿದೆ. ಇದೇ ಕಾರಣಕ್ಕೆ ಟ್ವಿಟರ್ ನಲ್ಲಿ ಬಾಯ್ಕಾಟ್ ನೆಟ್ ಫ್ಲಿಕ್ಸ್ ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಉದ್ದೇಶಪೂರ್ವಕವಾಗಿ ದ್ವೇಷ ಬಿತ್ತುವ ಮತ್ತು ಹಿಂದೂ ಧರ್ಮದ ಕುರಿತು ಅವಹೇಳನೆ ಮಾಡುವ ಸಲುವಾಗಿಯೇ ಈ ರೀತಿ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top