fbpx
ಸಮಾಚಾರ

ಮಾಸ್ಕ್ ಧರಿಸಿ ಎಂದ ವಿಕಲಚೇತನ ಮಹಿಳೆ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿದ ಅಧಿಕಾರಿ: ವಿಡಿಯೋ ವೈರಲ್

ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂಬುದನ್ನು ನೆನಪಿಸಿದ ವಿಕಲಚೇತನ ಮಹಿಳಾ ಉದ್ಯೋಗಿಯ ಕೂದಲನ್ನೆಳೆದು ಆಕೆಗೆ ಕಬ್ಬಿಣದ ರಾಡ್‍ ನಿಂದ ಸರಕಾರಿ ಅಧಿಕಾರಿಯೊಬ್ಬ ಥಳಿಸಿದ ಘಟನೆ ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಚೇರಿಯಲ್ಲಿ ನಡೆದಿದೆ. ಈ ಘಟನೆ ಸೀಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಸದ್ಯ ಪೊಲೀಸರು ಅಧಿಕಾರಿ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಆರೋಪಿಯನ್ನು ಸಿ ಭಾಸ್ಕರ್ ಎಂದು ಗುರುತಿಸಲಾಗಿದ್ದು, ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಹೋಟೆಲ್‍ನಲ್ಲಿ ಉಪ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಮಾನ ಹಾನಿ), 355, 324 (ಶಸ್ತ್ರಾಸ್ತ್ರ ಬಳಿಸಿ ಗಾಯಗೊಳಿಸುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.

ಮಂಗಳವಾರ ಘಟನೆ ನಡೆದಿದ್ದು, ಕೋವಿಡ್-19 ನಿಯಮಗಳ ಪಾಲನೆ ಮಾಡಲು ಅಧಿಕಾರಿಗೆ ಮಾಸ್ಕ್ ಧರಿಸುವಂತೆ ಮಹಿಳೆ ಹೇಳಿದ್ದರು. ಇಷ್ಟಕ್ಕೇ ಆಕ್ರೋಶಗೊಂಡ ಅಧಿಕಾರಿ ನೇರ ಹೋಟೆಲ್ ಒಳಗೆ ತೆರಳಿ ಮಹಿಳೆಯ ಮೇಲೆ ನಡೆಸಿ ನಿಂಧಿಸಿದ್ದಾನೆ. ಅಲ್ಲದೇ ಸ್ಥಳದಲ್ಲೇ ಇದ್ದ ರಾಡ್‍ನಿಂದ ಮಾರಣಾಂತಿಕ ದಾಳಿಯನ್ನು ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top