fbpx
ಸಮಾಚಾರ

ಮಾಜಿ ಸಚಿವ HD ರೇವಣ್ಣಗೆ ಕೊರೊನಾ ಸೋಂಕಿನ ಭೀತಿ.

ಮಾಜಿ ಸಚಿವ ಎಚ್‌ಡಿ ರೇವಣ್ಣಗೆ ಈಗ ಕೊರೊನಾ ಭೀತಿ ಶುರುವಾಗಿದೆ. ಎಚ್‌ಡಿ ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಇರುವ ನಾಲ್ವರು ಪೊಲೀಸರಿಗೆ ಕೊರೊನಾ ಪಾಸಿಟಿವ್‌ ದೃಢವಾಗಿದೆ. ಇದರಿಂದ ದೇವೇಗೌಡ ಪುತ್ರ ರೇವಣ್ಣಗೆ ಆತಂಕ ಹೆಚ್ಚಾಗಿದೆ. ಅವರಿಗೆ ಸ್ವ್ಯಾಬ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಸದ್ಯ ಎಚ್‌ಡಿ ರೇವಣ್ಣ ಬೆಂಗಳೂರಿನಲ್ಲಿಯೇ ಇದ್ದಾರೆ. ಆದರೆ ಬೆಂಗಳೂರಿನಲ್ಲಿ ಇರುವ ಮೂವರು ಹಾಗೂ ಹಾಸನದಲ್ಲಿರುವ ಓರ್ವ ಪೊಲೀಸ್‌ಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಈ ನಾಲ್ವರು ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರೇವಣ್ಣ ಬೆಂಗಾವಲು ವಾಹನದಲ್ಲಿ ಕೆಲಸ ಮಾಡುತ್ತಿರೋ‌ ನಾಲ್ವರು ಪೊಲೀಸರಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಇಂದು ರೇವಣ್ಣ ಕೂಡ ತಪಾಸಣೆಗೆ ಒಳಗಾಗಲಿದ್ದು, ಭದ್ರತಾ ಸಿಬ್ಬಂದಿಗೆ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ರೇವಣ್ಣ ಅವರು ಕ್ವಾರಂಟೈನ್ ಆಗುವುದು ಅನಿವಾರ್ಯವಾಗಲಿದೆ. ಎಚ್. ಡಿ. ರೇವಣ್ಣ ಇಬ್ಬರು ಆಪ್ತ ಸಹಾಯಕರಿಗೆ ಈಗಾಗಲೇ ಕೊರೊನಾ ವೈರಸ್ ಸೋಂಕಿನ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟೀವ್ ಬಂದಿದೆ. ರೇವಣ್ಣ ಅವರ ಮೂವರು ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಸೇರಿ ತಾಲ್ಲೂಕಿನ ಏಳು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top