fbpx
ಸಮಾಚಾರ

ಮೂರನೇ ಮಗುವಿಗೆ ಪ್ರೆಗ್ನೆಂಟ್ ಆಗಿದ್ದಾರಾ ರಾಧಿಕಾ ಪಂಡಿತ್? ಅಭಿಮಾನಿಗಳ ಅನುಮಾನಕ್ಕೆ ತೆರೆ ಎಳೆದ ನಟಿ

ರಾಜ್ಯ ಸರ್ಕಾರದ ಲಾಕ್‍ಡೌನ್ ನಿಯಮಗಳ ಕುರಿತು ನಟ ಯಶ್ ಹಂಚಿಕೊಂಡಿದ್ದ ಫೋಟೋ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಲಾಕ್‍ಡೌನ್ ಹೊರತು ರಾಖಿ ಭಾಯ್ ಇನ್ನೇನೋ ಸಿಗ್ನಲ್ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗುತ್ತಿತ್ತು. ಅನುಮಾನಕ್ಕೆ ಸ್ವತಃ ನಟಿ ಹಾಗೂ ಯಶ್ ಪತ್ನಿ ರಾಧಿಕಾ ಪಂಡಿತ್ ಉತ್ತರಿಸಿದ್ದಾರೆ.

 

 

ಅಷ್ಟಕ್ಕೂ ನೆಟ್ಟಿಗರಿಗೆ ಇಂಥ ಅನುಮಾನ ಯಾಕೆ ಮೂಡಿತು? ಅದಕ್ಕೆಲ್ಲ ಕಾರಣ ಆಗಿದ್ದು ಯಶ್‌ ಪೋಸ್‌ ನೀಡಿದ ಪರಿ. ರಾಧಿಕಾ ಪಕ್ಕದಲ್ಲಿ ಕುಳಿತು, ಹಣೆಯ ಮೇಲೆ ಮೂರು ಬೆರಳುಗಳನ್ನು ಇಟ್ಟುಕೊಂಡಿದ್ದ ಯಶ್‌ ಅವರನ್ನು ನೋಡಿದರೆ ‘ಮೂರು’ ಎಂಬ ವಿಚಾರವನ್ನು ಒತ್ತಿ ಹೇಳುವಂತಿತ್ತು. ಅದನ್ನು ಕಂಡ ಅನೇಕರಿಗೆ ಇದು ಅವರ ಮೂರನೇ ಮಗುವಿನ ಆಗಮನದ ಸುಳಿವು ಇರಬಹುದು ಎಂದು ಅನುಮಾನ ಮೂಡಿತ್ತು.

ಹೀಗಾಗಿ ಈ ಕುರಿತು ಕಮೆಂಟ್ ಮಾಡುವ ಮೂಲಕ ಸ್ಯಾಂಡಲ್‍ವುಡ್ ಸಿಂಡ್ರೆಲಾ ಪ್ರತಿಕ್ರಿಯಿಸಿದ್ದಾರೆ. ಗರ್ಭಿಣಿಯಾಗಿರುವ ಕುರಿತು ಉತ್ತರಿಸಿರುವ ಅವರು, ಸಿಗ್ನಲ್ ನೀಡಿದ್ದಾರೆ ಎಂಬ ಕುರಿತು ಯಾರೆಲ್ಲ ಯೋಚಿಸಿದ್ದೀರೋ ಅವರಿಗೆ ಉತ್ತರಿಸಲು ಬಯಸುತ್ತೇನೆ. ನಾನು ಗರ್ಭಿಣಿಯಾಗಿಲ್ಲ ಎಂದು, ಇಂಗ್ಲಿಷ್‍ನಲ್ಲಿ ನೋ ಐ ಆ್ಯಮ್ ನಾಟ್ ಪ್ರಗ್ನೆಂಟ್ ಎಂದು ಕಮೆಂಟ್ ಮಾಡಿದ್ದಾರೆ. ಈ ಮೂಲಕ ಹಲವರ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top