fbpx
ಸಮಾಚಾರ

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಜೊತೆ ಕೈಜೋಡಿಸಿದ ತಮಿಳು ಸ್ಟಾರ್ ಅಜಿತ್ ‘ದಕ್ಷ’

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಸದ್ಯ ರಾಜ್ಯ ಸರ್ಕಾರ ಸೋಂಕು ನಿಯಂತ್ರಣ ಮಾಡಲು ಹೊಸದೊಂದು ಮಾರ್ಗ ಕಂಡುಕೊಂಡಿದೆ. ವಿಶೇಷವೆಂದರೆ, ಇದಕ್ಕೆ ತಮಿಳು ನಟ ಅಜಿತ್ ಕೂಡ ಸಾಥ್ ನೀಡಿದ್ದಾರೆ.

ದಕ್ಷ ಅನ್ನೋ ಡ್ರೋನ್​ ಮೂಲಕ ಈಗ ತಮಿಳುನಾಡಿನಲ್ಲಿ ಕೊರೋನಾ ಸೋಂಕು ನಿವಾರಕಗಳನ್ನ ಸಿಂಪಡಿಸಲಾಗುತ್ತಿದೆ. ವಿಶೇಷ ಅಂದ್ರೆ, ಈ ದಕ್ಷ ಯೋಜನೆ ಯಶಸ್ವಿಯ ಹಿಂದೆ ನಟ ಅಜಿತ್​ ಅವರ ಪಾತ್ರವೂ ಇದೆ. ಅಜಿತ್ ಮಾರ್ಗದರ್ಶನದಲ್ಲಿ ತಯಾರಾದ ಸುಧಾರಿತ ದಕ್ಷ ಡ್ರೋನ್ ಗಳನ್ನು ಬಳಸಿಕೊಂಡು ಕರ್ನಾಟಕದಲ್ಲೂ ಸ್ಯಾನಿಟೈಸ್ ಸಿಂಪಡನೆ ಮಾಡಲು ಸರ್ಕಾರ ಮುಂದಾಗಿದೆ. ಈ ವಿಚಾರವನ್ನು ಡಿಸಿಎಂ ಅಶ್ವಥ್ ನಾರಾಯಣ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಹಂಚಿಕೊಂಡಿದ್ದಾರೆ.

ಈ ಹಿಂದೆ 2018ರಲ್ಲಿ, ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಜಿತ್ ಅವರನ್ನು ತಮ್ಮ ಪ್ರಾಜೆಕ್ಟ್​ಗಳ ಸಿಸ್ಟಮ್ ಸಲಹೆಗಾರ ಹಾಗೂ ಹೆಲಿಕಾಪ್ಟರ್ ಟೆಸ್ಟ್ ಪೈಲೆಟ್ ಆಗಿ ನೇಮಿಸಿತ್ತು. ಇವರ ಮಾರ್ಗದರ್ಶನದಡಿ ‘ದಕ್ಷ‘ ಎಂಬ ನೂತನ ಡ್ರೋನ್​ ತಯಾರಿಸಲಾಗಿತ್ತು. ಹೀಗೆ ತಯಾರಾದ ‘ದಕ್ಷ ‘ ಆರು ಗಂಟೆ ಏಳು ನಿಮಿಷಗಳ ಕಾಲ ನಿರಂತರ ಹಾರಾಟ ನಡೆಸಿ ‘ಮೆಡಿಕಲ್ ಎಕ್ಸಪ್ರೆಸ್-2018 ಯುಎವಿ ಚ್ಯಾಲೆಂಜ್‘​ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈಗ ಇದೇ ಡ್ರೋನ್​ ಮೂಲಕ ಸ್ಯಾನಿಟೈಸ್ ಮಾಡುವ ಕಾರ್ಯ ನಡೆಯುತ್ತಿದೆ. 30 ನಿಮಿಷದಲ್ಲಿ ಒಂದು ಎಕರೆಗೂ ಹೆಚ್ಚು ಜಾಗದಷ್ಟು ಸಿಂಪಡಣೆ ಮಾಡುವ ಶಕ್ತಿ ‘ದಕ್ಷ” ಹೊಂದಿದೆ.

 

 

ಅಶ್ವತ್ ನಾರಾಯಣ್ ಮೆಚ್ಚುಗೆ:
ಅಜಿತ್ ಹಾಗೂ ದಕ್ಷದ ಗುಣಗಾನ ಮಾಡಿ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಟ್ವೀಟ್ ಮಾಡಿದ್ದಾರೆ. ‘ಕೋವಿಡ್‌ 19 ಪೀಡಿತ ಪ್ರದೇಶಗಳನ್ನು ಸ್ಯಾನಿಟೈಸ್‌ ಮಾಡುವ ಸಲುವಾಗಿ ನಟ ಅಜಿತ್‌ ಮಾರ್ಗದರ್ಶನದಲ್ಲಿ ಈ ಡ್ರೋನ್‌ಗಳನ್ನು ತಯಾರಿಸಿರುವ ದಕ್ಷ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ. ಜೊತೆಗೆ ಸಾಕಷ್ಟು ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top