fbpx
ಸಮಾಚಾರ

ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಕನ್ನಡ ನಟಿ ನವ್ಯಾ ಸ್ವಾಮಿಗೆ ಕೊರೊನಾ ಪಾಸಿಟಿವ್

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನ ತಡೆಗಟ್ಟಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಸೋಂಕು ಮಾತ್ರ ಹರಡುತ್ತಲೇ ಇದೆ. ಇದೀಗ ಸೆಲೆಬ್ರಿಟಿಗಳು, ರಾಜಕಾರಣಿಗಳ ಸಂಬಂಧಿಕರವರೆಗೂ ತಲುಪಿರುವ ಕೊರೊನಾ ಸೋಂಕು ಮತ್ತಷ್ಟು ಆತಂಕ ಸೃಷ್ಟಿಸಿದೆ.

ತೆಲಂಗಾಣ ಸರ್ಕಾರ ಜೂನ್ 15ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಲವು ಧಾರಾವಾಹಿಗಳ ಚಿತ್ರೀಕರಣ ಪ್ರಾರಂಭಗೊಂಡಿದ್ದವು. ಇದೀಗ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ. ನಟಿ ನವ್ಯಾ ಸ್ವಾಮಿ ಮಹಾಮಾರಿ ಕೊರೋನಾಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದ್ದು ಚಿತ್ರೀಕರಣದಲ್ಲಿ ಪಾಲ್ಗೊಂಡ ಇತರರು ಇದೀಗ ಆತಂಕಕ್ಕೀಡಾಗಿದ್ದಾರೆ.

ನವ್ಯಾ ಸ್ವಾಮಿ ಕೆಲ ದಿನಗಳ ಹಿಂದೆ ಕೊರೋನಾ ಟೆಸ್ಟ್​ಗೆ ಒಳಗಾಗಿದ್ದರು. ಇದೀಗ ಫಲಿತಾಂಶವು ಪಾಸಿಟಿವ್ ಬಂದಿದ್ದು, ನಟಿ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಹಾಗೆಯೇ ನಟಿಯೊಂದಿಗೆ ಶೂಟಿಂಗ್ ವೇಳೆ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ. ಚಿತ್ರೀಕರಣದ ವೇಳೆಯೇ ಕೊರೋನಾ ವೈರಸ್ ಸೋಂಕಿತರ ಜತೆ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ 10 ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ‘ಸ್ವಯಂವರ’ ರಿಯಾಲಿಟಿ ಶೋನಲ್ಲಿ ನಟಿ ರಕ್ಷಿತಾ ಪ್ರೇಮ್ ನಿರೂಪಕರಾಗಿದ್ದರು. ಇದರಲ್ಲಿ ನಟಿ ನವ್ಯಾ ಸ್ವಾಮಿ ಭಾಗವಹಿಸಿದ್ದರು. ‘ಸ್ಟಾರ್ ಸವಿರುಚಿ’, ‘ಲಕುಮಿ’, ‘ತೆಂದ್ರಲ್’, ‘ತಕ ಧಿಮಿ ತ ಡಾನ್ಸಿಂಗ್ ಸ್ಟಾರ್’, ‘ಬಾಯ್ರಾಮಣಿ’, ‘ತಲಾಂಬ್ರಲು’ ಮುಂತಾ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ನವ್ಯಾ ಭಾಗವಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top