fbpx
ಸಮಾಚಾರ

ಬಾವನ ನೆನಪಿನಲ್ಲಿ ಅಮೂಲ್ಯವಾದ ವಿಡಿಯೋ ಹಂಚಿಕೊಂಡ ಪ್ರೇರಣಾ ಸರ್ಜಾ

ಚಿರಜೀವಿ ಸರ್ಜಾ ಅವರ ಅಕಾಲಿಕ ಅಗಲಿಕೆಯ ನೋವಿನಿಂದ ಇನ್ನೂ ಅವರ ಕುಟುಂಬದವರು ಹೊರ ಬಂದಿಲ್ಲ. ಅವರ ನೆನಪಿನಲ್ಲೇ ಇರುವ ಕುಟುಂಬಸ್ಥರು ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತಾಗಿ ಪೋಸ್ಟ್​ ಮಾಡುತ್ತಾ ಭಾವುಕರಾಗುತ್ತಿದ್ದಾರೆ. ಇದೀಗ ಚಿರಂಜೀವಿ ನೆನಪಿನಲ್ಲಿ ಧ್ರುವ ಸರ್ಜಾರ ಪತ್ನಿ ಪ್ರೇರಣಾ ಸರ್ಜಾ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಪ್ರೇರಣಾ ಶಂಕರ್​ ಹಾಗೂ ಚಿರಂಜೀವಿ ಸರ್ಜಾ ಒಂದು ಟಿಕ್​ಟಾಕ್​ ವಿಡಿಯೋ ಮಾಡಿದ್ದು, ಅದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಚಿರು ಹಾಗೂ ಪ್ರೇರಣಾ ಸಖತ್​ ಸ್ಟೆಪ್​ ಹಾಕಿದ್ದಾರೆ.

 

 

ಚಿರಂಜೀವಿ ಸರ್ಜಾ ಅವರ ಜೊತೆಗೆ ಫನ್ನಿಯಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಪ್ರೇರಣಾ, ನಾವು ಈ ವಿಡಿಯೋವನ್ನು ತಮಾಷೆಗಾಗಿ ಮಾಡಿದ್ದೇವೆ. ನಾನು ಯಾವುತ್ತೂ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಈಗ ನನ್ನ ಬಳಿ ಇರುವ ವಿಡಿಯೋದಲ್ಲಿ ಈ ವಿಡಿಯೋ ಅತ್ಯಂತ ಅಮೂಲ್ಯವಾದ್ದು ಎಂದು ಬರೆದು ಚಿರು ಎಂದು ಹಾರ್ಟ್ ಇಮೋಜಿ ಹಾಕಿ ಇನ್‍ಸ್ಟಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top