fbpx
ಸಮಾಚಾರ

ಒಂದೇ ತಿಂಗಳಲ್ಲಿ 50 ಸಿಮ್‌ ಕಾರ್ಡ್‌ ಬದಲಿಸಿದ್ದ ನಟ ಸುಶಾಂತ್‌ ಸಿಂಗ್‌: ಕಾರಣವೇನು? ಅಚ್ಚರಿ ಸುದ್ದಿ ಬಹಿರಂಗ

ಬಾಲಿವುಡ್​​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಅಲ್ಲದೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಕಾಡಿದ್ದವು. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲವಾದರೂ, ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿ ಬಂದಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸುಶಾಂತ್‌ ಒಂದು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಸಿಮ್‌ ಕಾರ್ಡ್‌ ಬದಲಿಸಿದ್ದರು. ಅವರ ಮನೆಯ ನಕಲಿ ಕೀ ಕಳೆದುಹೋಗಿತ್ತು. ಸುಶಾಂತ್‌ ಸಾವಿನ ರಹಸ್ಯಕಣ್ಣಿಗೆ ನಿಲುಕದ್ದು ಎಂದು ಸುಶಾಂತ್‌ ಸಿಂಗ್‌ ಸಾವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ‘ಜಸ್ಟೀಸ್‌ ಫಾರ್‌ ಸುಶಾಂತ್‌ ಫೋರಂ’ ಆರಂಭಿಸಿರುವ ನಟ ಶೇಖರ್‌ ಸುಮನ್‌ ಹೇಳಿದ್ದಾರೆ.

ಬಿಹಾರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೇಖರ್‌ ಸುಮನ್‌ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಈ ಪ್ರಕರಣದಲ್ಲಿ ಅನೇಕ ಮಿಸ್ಸಿಂಗ್‌ ಲಿಂಕ್‌ಗಳಿವೆ. ಸೂಸೈಡ್‌ ನೋಟ್‌ ಯಾಕೆ ಇರಲಿಲ್ಲ? ಒಂದೇ ತಿಂಗಳಲ್ಲಿ ಸುಶಾಂತ್‌ ಬರೋಬ್ಬರಿ 50 ಸಿಮ್‌ ಕಾರ್ಡ್‌ಗಳನ್ನು ಯಾಕೆ ಬದಲಾಯಿಸಿದ್ದರು? ಯಾರಿಂದಲಾದರೂ ತಪ್ಪಿಸಿಕೊಳ್ಳಬೇಕು ಎಂಬ ಸಂದರ್ಭದಲ್ಲಿ ಮಾತ್ರ ಈ ರೀತಿ ಮಾಡುತ್ತಾರೆ ಅಥವಾ ಸುಶಾಂತ್‌ಗೆ ಯಾರಿಂದಲೋ ಬೆದರಿಕೆ ಕರೆಗಳು ಬರುತ್ತಿದ್ದಿರಬಹುದು’ ಎಂದು ಶೇಖರ್‌ ಸುಮನ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top