fbpx
ಸಮಾಚಾರ

ಅಂದು ಅಣ್ಣಾವ್ರು ಫೋನ್ ನಲ್ಲಿ ಮಾತನಾಡಿದ್ದ ಅಪರೂಪದ ವಿಡಿಯೋ ಹಂಚಿಕೊಂಡ ರಾಘಣ್ಣ: ವಿಡಿಯೋ ವೈರಲ್

ನನ್ನ ಯಶಸ್ಸಿನಲ್ಲಿ ನನ್ನ ಪ್ರಯತ್ನ ಕಡಿಮೆ, ದೇವರ ಯತ್ನ ಜಾಸ್ತಿ ಎಂದು ಹೇಳಿದ್ದ ಡಾ. ರಾಜ್‍ಕುಮಾರ್ ಅವರ ಫೋನ್ ಸಂಭಾಷಣೆಯನ್ನು ಹಿರಿಯ ನಟ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

 

 

ಸುಮಾರು 2 ನಿಮಿಷ 20 ಸೆಕೆಂಡ್ ಇರುವ ವಿಡಿಯೋದಲ್ಲಿ ಅಣ್ಣಾವ್ರು ಫೋನಿನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರ ತಂದೆಯ ಬಗ್ಗೆ ಮತ್ತು ಅವರ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿರುವ ರಾಘಣ್ಣ ಅಪ್ಪಾಜಿಯ ಅಪರೂಪದ ಫೋನ್ ಸಂಭಾಷಣೆ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ರಾಜ್‌ಕುಮಾರ್‌ ಅವರು ತಮ್ಮ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಿಯವರ ಬಗ್ಗೆ, ಜೀವನಕ್ಕೆ ಹಾಗೂ ಬಣ್ಣದ ಬದುಕಿಗೆ ಅವರು ಕೊಟ್ಟ ಮಾರ್ಗದರ್ಶನದ ಬಗ್ಗೆ ನಗುನಗುತ್ತಾ ಮಾತನಾಡಿದ್ದಾರೆ. ವೀಡಿಯೋಗೆ ಸಾವಿರಾರು ಮಂದಿ ಲೈಕ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top