fbpx
ಸಮಾಚಾರ

ಶಿವಣ್ಣನ ಅಭಿಮಾನಿಗಳ ಆಸೆ ಈಡೇರಿಸಿದ ಕಿಚ್ಚ ಸುದೀಪ್: ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬಕ್ಕೆ ಅಡ್ವಾನ್ಸ್ ಗಿಫ್ಟ್

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೂ 7 ದಿನ ಬಾಕಿ ಇದ್ದು, ಅವರ ಅಭಿಮಾನಿಗಳು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಕಿಚ್ಚ ಸುದೀಪ್ ಈಗಲೇ ವಿಶೇಷ ಗಿಫ್ಟ್ ನೀಡುವ ಮೂಲಕ ಶುಭ ಕೋರಿದ್ದಾರೆ.

 

 

ಪ್ರತಿ ವರ್ಷ ಶಿವ ರಾಜ್​ಕುಮಾರ್​ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸ್ಪೆಷಲ್​ ಆಗಿ ಆಚರಣೆ ಮಾಡುತ್ತಾರೆ. ಅದರಂತೆ ಈ ವರ್ಷ ಅಭಿಮಾನಿಗಳು ಗಾಜನೂರಿನ ಗಂಡಿಗೆ ವಿಶೇಷ DPಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡುವ ಪ್ಲಾನ್​ ಮಾಡಿಕೊಂಡಿದ್ದರು. ಶಿವಣ್ಣನ ಅಭಿಮಾನಿಗಳು ಸಿದ್ದಪಡಿಸಿದ್ದ ಆ ವಿಶೇಷ DPಅನ್ನು ಸುದೀಪ್ ಅವರಿಂದ ಬಿಡುಗಡೆ ಮಾಡಬೇಕು ಎಂದು ಬಯಸಿದ್ದರು. ಈ ವಿಚಾರವಾಗಿ ಸುದೀಪ್ ಅವರ ಬಳಿ ಮನವಿ ಮಾಡಿಕೊಂಡು ಸುದೀಪ್​ ಅವರ ಮೂಲಕ ನೂತನ DPಯನ್ನು ಬಿಡುಗಡೆ ಮಾಡಿಸಿದ್ದಾರೆ. ಆ ಮೂಲಕ ಶಿವ ರಾಜ್​ಕುಮಾರ್​ ಹುಟ್ಟುಹಬ್ಬಕ್ಕೆ ಕಿಚ್ಚ ಹಾಗೂ ಶಿವಣ್ಣನ ಅಭಿಮಾನಿಗಳು ಅಡ್ವಾನ್ಸ್​ ವಿಶ್​ ಮಾಡಿದ್ದಾರೆ.

ಸಿಡಿಪಿ ಬಿಡುಗಡೆ ಮಾಡಿರುವ ಕುರಿತು ಸ್ವತಃ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಶಿವಣ್ಣ ಅವರ ಬಂಗಾರದ ಬಣ್ಣದ ಪುತ್ಥಳಿಯ ಚಿತ್ರವನ್ನು ಕಾಮನ್ ಡಿಪಿ ಮಾಡಲಾಗಿದೆ. ಸರಳತೆಯ ಮೂರ್ತರೂಪ ಎಂಬ ಟ್ಯಾಗ್‌ ಲೈನ್ ಬರೆಯಲಾಗಿದೆ. ಜೊತೆಗೆ 58ನೇ ಶಿವಣ್ಣ ಮಹೋತ್ಸವ ಎಂದು ಬರೆಯಲಾಗಿದೆ. ಕಾಮನ್ ಡಿಪಿ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಚೆನ್ನಾಗಿಲ್ಲವೆಂದು ಸಹ ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top