fbpx
ಸಮಾಚಾರ

ವೈರಲ್ ಆಯ್ತು 100 ವರ್ಷದ ಹಿಂದೆ ಸಾಂಕ್ರಾಮಿಕ ರೋಗ ಬಂದಾಗ ಜಾರಿಗೊಳಿಸಿದ್ದ ನೋಟಿಸ್

ಚೀನಾ ದೇಶದಿಂದ ಶುರುವಾದ ಕೊರೋನಾ ಸೋಂಕಿನಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಕೋವಿಡ್ -19 ಗೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಇಲ್ಲ – ಅನೇಕ ಪ್ರಯೋಗಗಳನ್ನು ನಡೆಸಲಾಗುತ್ತಿದೆ, ಈ ನಿಟ್ಟಿನಲ್ಲಿ ವಿಜ್ಞಾನಿಗಳು ಹಗಲು ರಾತ್ರಿ ಎನ್ನದೆ ಸಂಶೋಧನೆ ನಡೆಸುತ್ತಿದ್ದಾರೆ.

ಬಹುಶಃ ಕೊರೋನಾಗೆ ರೀತಿಯ ಸಾಂಕ್ರಾಮಿಕ ಕಾಯಿಲೆಗೆ ಮತ್ತೊಂದು ಉದಾಹರಣೆ ಕೊಡಬೇಕು ಅಂದರೆ ಅದು ಸ್ಪ್ಯಾನಿಷ್ ಫ್ಲೂ, ಇದು ವಿಶ್ವ ಮತ್ತು ಭಾರತದ ಅತ್ಯಂತ ಕುಖ್ಯಾತ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ, ಇದು ಸುಮಾರು ಒಂದು ಶತಮಾನದ ಹಿಂದೆ ಕಂಡಿತು. ಕೊರೊನಾ ರೀತಿಯಲ್ಲೇ 1928ರಲ್ಲಿ ಸ್ಪ್ಯಾನಿಶ್ ಫ್ಲೂ ಎನ್ನುವ ಮಹಾಮಾರಿಯೊಂದು ವಿಶ್ವವನ್ನು ಕಾಡಿತ್ತು.

ಸುಮಾರು 92 ವರ್ಷಗಳ ಹಿಂದೆ 1928 ರಲ್ಲಿ ಸ್ಪ್ಯಾನಿಷ್ ಪ್ಲೂ ಎಂಬ ಸಾಂಕ್ರಾಮಿಕ ರೋಗ ಬಂದಾಗ ಅಂದಿನ ಬೆಂಗಳೂರು ಸಿಟಿ ಮುನ್ಸಿಪಲ್ ಕೌನ್ಸಿಲ್ ಆರೋಗ್ಯ ಇಲಾಖೆ ಅಧಿಕಾರಿಗಳು ಜಾರಿಮಾಡಿದ್ದ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

 

 

ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಂಸದ ಚಂದ್ರಶೇಖರ್ “ಸುಮಾರು 100 ವರ್ಷಗಳ ಹಿಂದೆ ವಿಶ್ವದಾದ್ಯಂತ 5 ಕೋಟಿ ಜನರನ್ನು ಬಲಿ ತಗೊಂಡ ಸಾಂಕ್ರಾಮಿಕ ರೋಗ “ಸ್ಪ್ಯಾನಿಷ್ ಫ್ಲೂ” ತಡೆಗತಲು ಜನಸಂದಣಿ ಇರುವ ನಾಟಕ ಮತ್ತು ಸಿನೆಮಾ ಥಿಯೇಟರ್‌ ಗಳಿಗೆ ಹೋಗಬೇಡಿ ಎಂದು ಅಂದಿನ ಬೆಂಗಳೂರು ನಗರ ಮುನ್ಸಿಪಲ್ ಕೌನ್ಸಿಲ್ ನೀಡಿದ ನೋಟಿಸ್ !
Notice issued by Bengaluru City Municipal council 100 years ago” ಎಂದು ಬರೆದುಕೊಂಡಿದ್ದಾರೆ.

ನೋಟಿಸ್ ನಲ್ಲಿ ಏನಿದೆ?
ಸಂಸದ ಜಿಸಿ ಚಂದ್ರಶೇಖರ್ ಪೋಸ್ಟ್ ಮಾಡಿರುವ ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗದ ಕುರಿತ ನೋಟಿಸ್ ನಲ್ಲಿ ಜನರ ಆರೋಗ್ಯದ ಹಿತದೃಷ್ಠಿಯಿಂದ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಆ ಪೈಕಿ ಜನರು ಗುಂಪು ಸೇರುವ ಸ್ಥಳಗಳಾದ ನಾಟಕ, ಸಿನಿಮಾ ಮುಂತಾದ ಕಾರ್ಯಕ್ರಮಗಳಿಗೆ ಹೋಗಬಾರದು, ಕೆಮ್ಮುತ್ತಿರುವವರ ಹತ್ತಿರ ಹೋಗಬಾರದು, ದಿನಚರಿ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು, ರಾತ್ರಿ ಹಗಲು ಒಳ್ಳೆಯ ಗಾಳಿ ಸಿಗುವಂತೆ ನೋಡಬೇಕು ಸೇರಿದಂತೆ ಅನೇಕ ಸೂಚನೆಗಳನ್ನು ನೀಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top