fbpx
ಸಮಾಚಾರ

ಹಿರಿಯ ನಟಿ ಜಯಂತಿ ಆರೋಗ್ಯದಲ್ಲಿ ಏರುಪೇರು : ಐಸಿಯುನಲ್ಲಿ ಚಿಕಿತ್ಸೆ

ಹೆಸರಾಂತ ನಟಿ ಜಯಂತಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌. ವಿಕ್ರಮ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಕೆ ಎಸ್ ಸತೀಶ್ ಮತ್ತು ತಂಡ ನಟಿ ಜಯಂತಿ ಅವರನ್ನು ವೆಂಟಿಲೇಟರ್​​ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಜಯಂತಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಅವರ ಮಗ ಕೃಷ್ಣಕುಮಾರ್, “ಅಸ್ತಮ ಸಮಸ್ಯೆಯಿಂದ ಎರಡು ದಿನಗಳ ಹಿಂದೆಯೇ ತಾಯಿಯವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಅವರಿಗೆ ಕೊರೊನಾ ಟೆಸ್ಟ್ ಕೂಡ ನಡೆಸಿದ್ದು, ವರದಿಯಲ್ಲಿ ನೆಗಟಿವ್ ಬಂದಿದೆ. ಯಾವುದೇ ತೊಂದರೆ ಇಲ್ಲ. ಅಮ್ಮನನ್ನು ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ “ಎಂದು ಹೇಳಿದ್ದಾರೆ.

ನಾಲ್ಕು ತಿಂಗಳ ಹಿಂದೆಯಷ್ಟೇ ಇದೇ ರೀತಿ ಅಸ್ತಮಾ ಉಲ್ಬಣಿಸಿ ಉಸಿರಾಟದ ತೊಂದರೆ ಎದುರಾಗಿತ್ತು. ಆಗಲೂ ಜಯಂತಿ ಅವರನ್ನು ವಿಕ್ರಮ್ ಆಸ್ಪತ್ರೆಯಲ್ಲೇ ವೈದ್ಯರಾದ ಡಾ. ಸತೀಶ್ ಅವರೇ ಚಿಕಿತ್ಸೆ ನೀಡಿದ್ದರು. ಈಗ ಕೆಲ ದಿನಗಳಿಂದ ಮಳೆ ಹಾಗೂ ಚಳಿಯ ಕಾರಣದಿಂದಾಗಿ ಉಸಿರಾಟದ ತೊಂದರೆ ಎದುರಾಗಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top