fbpx
ಸಮಾಚಾರ

ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಖ್ಯಾತ ನಟ ಮತ್ತು ಹೆಸರಾಂತ ನಿರ್ಮಾಪಕರಾಗಿರುವ ರಾಕ್‌ಲೈನ್ ವೆಂಕಟೇಶ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ವೆಂಕಟೇಶ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲವಾದರೂ, ಕೊರೊನಾ ಮುಂಜಾಗೃತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ.

ಮೊನ್ನೆಯಷ್ಟೇ ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ದೃಢಪಟ್ಟಿತ್ತು. ಅವರ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ವೆಂಕಟೇಶ್ ಕ್ವಾರಂಟೀನ್​ಗೆ ಒಳಗಾಗಿದ್ದರು. ಇದೀಗ ಮುಂಜಾಗ್ರತಾ ಕ್ರಮವಾಗಿ ರಾಕ್​ಲೈನ್ ವೆಂಕಟೇಶ್ ರಾಜ್​ಕುಮಾರ್ ರಸ್ತೆಯಲ್ಲಿರೋ ಸುಗುಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಕ್‌ಲೈನ್ ವೆಂಕಟೇಶ್ ಅವರ ಪುತ್ರ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ತಂದೆಯವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಕೊರೊನಾ ಲಕ್ಷಣಗಳು ಏನಾದರು ಕಂಡು ಬಂದಿವೆಯಾ ಇಲ್ವೋ ಎಂಬ ಯಾವ ವಿಚಾರವೂ ಎಲ್ಲಿಯೂ ತಿಳಿದುಬಂದಿಲ್ಲ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top