fbpx
ಸಮಾಚಾರ

ರಾಕ್‌ಲೈನ್ ವೆಂಕಟೇಶ್ ಪತ್ನಿಗೆ ಕೊರೊನಾ ಪಾಸಿಟಿವ್

ನಿರ್ಮಾಪಕ ರಾಕ್‌ಲೈವ್ ವೆಂಕಟೇಶ್ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅವರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಸೋಂಕು ದೃಢಪಟ್ಟಿಲ್ಲ.

ಮೊನ್ನೆಯಷ್ಟೇ ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ದೃಢಪಟ್ಟಿತ್ತು. ಅವರ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ವೆಂಕಟೇಶ್ ಕ್ವಾರಂಟೀನ್​ಗೆ ಒಳಗಾಗಿದ್ದರು. ಇದೀಗ ಮುಂಜಾಗ್ರತಾ ಕ್ರಮವಾಗಿ ರಾಕ್​ಲೈನ್ ವೆಂಕಟೇಶ್ ಕೂಡ ರಾಜ್​ಕುಮಾರ್ ರಸ್ತೆಯಲ್ಲಿರೋ ಸುಗುಣ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದು ನೆಗಿಟಿವ್ ವರದಿ ಬಂದಿದೆ. ಆದರೆ ವೆಂಕಟೇಶ್ ಅವರ ಪತ್ನಿಗೆ ಕೋವಿಡ್ ಪಾಸಿಟಿವ್ ಬಂದಿದೆ.

“ನಮ್ಮ ತಾಯಿಗೆ ಮಾತ್ರ ಕೊರೊನಾ ಸೋಂಕು ಇತ್ತು. ಹೀಗಾಗಿ ನಮ್ಮ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಮ್ಮ ತಂದೆ ಅವರಿಗೆ ಕೊರೊನಾ ಸೋಂಕು ತಗುಲಿಲ್ಲ” ಎಂದು ರಾಕ್‌ಲೈನ್ ವೆಂಕಟೇಶ್ ಪುತ್ರ ಯತೀಶ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top