fbpx
ಸಮಾಚಾರ

ಕೊರೋನಾದಿಂದಾಗಿ ನಟ ಶ್ರೀನಗರ ಕಿಟ್ಟಿ ಸಹೋದರ ಸಾವು

ಮಹಾಮಾರಿ ಕೊರೋನಾ ವೈರಸ್​ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅನೇಕರು ಸಾವನ್ಪಪ್ಪುತ್ತಿದ್ದಾರೆ. ಇತ್ತ ಸ್ಯಾಂಡಲ್ ವುಡ್​ಗೂ ಬಿಡದೆ ಕಾಡುತ್ತಿದೆ ಕೊರೋನಾ. ಈಗ ಬಂದಿರುವ ಸುದ್ದಿಯ ಪ್ರಕಾರ ನಟ ಶ್ರೀನಗರ ಕಿಟ್ಟಿ ಸಹೋದರ ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಬುಧವಾರ ಹೃದಯಾಘಾತದಿಂದ ಕಿಟ್ಟಿ ಸಹೋದರ ನಿಧನರಾಗಿದ್ದರು. ನಂತರ ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಶ್ರೀನಗರ ಕಿಟ್ಟಿ ಸಹೋದರ ಶಿವಶಂಕರ್ ಕೋವಿಡ್ ನಿಂದ ಸಾವನ್ನಪ್ಪಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಿಟ್ಟಿ ಸಹೋದರನ ಶವವನ್ನು ಕೊವಿಡ್ ನಿಯಮಾವಳಿಗಳಿಗೆ ಅನುಸಾರ ಅಂತಿಮ ಸಂಸ್ಕಾರ ಮಾಡಲಾಗಿದೆ.

ಈ ವಿಚಾರ ತಿಳಿದುಬಂದತೆ ಇಡೀ ಕುಟುಂಬ ಕೊವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ದೇವರ ದಯೆಯಿಂದ ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆಯಂತೆ. ಆದರೂ ಸಹ ಇಡೀ ಕುಟುಂಬವನ್ನ 14 ದಿನಗಳ ಕಾಲ ಹೋಂ ಕ್ವಾರಂಟೈನ್​​ಗೆ ಒಳಪಡಿಸಿ, ಶ್ರೀನಗರದಲ್ಲಿರೋ ನಿವಾಸವನ್ನ ಸೀಲ್ ಡೌನ್ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top