fbpx
ಸಮಾಚಾರ

2021ಕ್ಕೆ ಭಾರತದಲ್ಲಿ ಪ್ರತಿ ದಿನ 2.8 ಲಕ್ಷ ಕೇಸ್: ಬೆಚ್ಚಿಬೀಳಿಸಿದ ಸಂಶೋಧನಾ ವರದಿ

ಕೊರೋನಾ ವೈರಸ್‌ಗೆ ಲಸಿಕೆ ಅಥವಾ ಔಷಧ ಸಿಗದೆ ಹೋದರೆ, 2021ರ ಚಳಿಗಾಲದ ವೇಳೆಗೆ ಭಾರತದಲ್ಲಿ ಪ್ರತಿನಿತ್ಯ ಬರೋಬ್ಬರಿ 2.87 ಲಕ್ಷ ಸೋಂಕಿತರು ಕಂಡುಬರುವ ಸಾಧ್ಯತೆ ಇದೆ ಎಂದು ಸಂಶೋಧನಾ ವರದಿಯೊಂದು ಹೇಳಿದೆ.

ಒಂದು ವೇಳೆ ಕೊರೊನಾ ವೈರಸ್‌ಗೆ ಸೂಕ್ತ ಲಸಿಕೆ ಲಭ್ಯವಾಗದೆ ಹೋದರೆ 2021ರ ಚಳಿಗಾಲದ ವೇಳೆಗೆ ಭಾರತದಲ್ಲಿ ದಿನವೊಂದಕ್ಕೆ 2.87 ಲಕ್ಷ ಕೋವಿಡ್‌-19 ಪ್ರಕರಣಗಳು ಪತ್ತೆಯಾಗಲಿವೆ. ಆ ಮೂಲಕ ಅಮೆರಿಕವನ್ನೂ ಹಿಂದಿಕ್ಕಿಲಿದೆ ಎಂದು ಮಿಷಿಗನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ) ತಜ್ಞರು ಅಂದಾಜಿಸಿದ್ದಾರೆ. ಪ್ರತಿನಿತ್ಯ ಪತ್ತೆಯಾಗುತ್ತಿರುವ ಪ್ರಕರಣಗಳನ್ನು ಆಧರಿಸಿ ಈ ಅಂದಾಜು ಮಾಡಲಾಗಿದೆ.

ಎಂಐಟಿ ಪ್ರಾಧ್ಯಾಪಕರಾದ ಹಜೀರ್ ರಹಮಾಂಡಾದ್ ಮತ್ತು ಜಾನ್ ಸ್ಟರ್ಮನ್ ಮತ್ತು ಪಿಎಚ್‌ಡಿ ಅಭ್ಯರ್ಥಿ ತ್ಸೆ ಯಾಂಗ್ ಲಿಮ್, 2021 ರ ಚಳಿಗಾಲದ ಕೊನೆಯಲ್ಲಿ ದೈನಂದಿನ ಸೋಂಕಿನ ಪ್ರಮಾಣವನ್ನು ಯೋಜಿಸುವ ಮೂಲಕ ಮೊದಲ ಹತ್ತು ರಾಷ್ಟ್ರಗಳು ಭಾರತದಲ್ಲಿ ದಿನಕ್ಕೆ 2.87 ಲಕ್ಷ ಸೋಂಕುಗಳು ಇರಲಿವೆ, ನಂತರ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಆಫ್ರಿಕಾ, ಇರಾನ್, ಇಂಡೋನೇಷ್ಯಾ, ಯುಕೆ, ನೈಜೀರಿಯಾ, ಟರ್ಕಿ, ಫ್ರಾನ್ಸ್ ಮತ್ತು ಜರ್ಮನಿ ಕ್ರಮವಾಗಿ ಇರಲಿವೆ ಎಂದು ಅಧ್ಯಯನ ತಿಳಿಸಿದೆ.

ಈ ಅಂದಾಜುಗಳು ಬಹಳ ಸೂಕ್ಷ್ಮವಾಗಿದ್ದು, ಆರೋಗ್ಯ ತಪಾಸಣಾ ಕ್ರಮಗಳು ಮತ್ತು ಜನರ ವರ್ತನೆ ಹಾಗೂ ಸರ್ಕಾರದ ನೀತಿ ನಿರೂಪಣೆಗಳ ಮೇಲೆ ಅವಲಂಬಿತವಾಗಿರುತ್ತವೆ. ವ್ಯಾಪಕವಾಗಿ ಸೋಂಕು ಪತ್ತೆ ತಪಾಸಣೆ ಮತ್ತು ಜನರು ಅಂತರ ಕಾಯ್ದುಕೊಳ್ಳುವುದರಿಂದ ಸೋಂಕು ನಿಯಂತ್ರಣವಾಗುತ್ತದೆ. ಆದರೆ, ಕೊರೊನಾ ಸೋಂಕಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸದಿದ್ದರೆ ಸೋಂಕು ವ್ಯಾಪಕವಾಗಲಿದೆ ಎಂದು ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top