fbpx
ಸಮಾಚಾರ

ಮಹಾರಾಷ್ಟ್ರದಲ್ಲಿ 900 ವರ್ಷ ಹಳೆಯ ಜೈನ ಮೂರ್ತಿಗಳು ಪತ್ತೆ: ಮೂರ್ತಿಗಳ ಮೇಲೆ ಕನ್ನಡ ಸಾಲುಗಳು

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹುಪರಿ ನಗರದಲ್ಲಿ 12 ಶತಮಾನದಲ್ಲಿ ನಿರ್ಮಿತವಾದವು ಎನ್ನಲಾದ ಭಗವಾನ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಎರಡು ಮೂರ್ತಿಗಳು ಸಿಕ್ಕಿವೆ. ಶ್ರೀ 1008 ಚಂದ್ರಪ್ರಭು ದೇವಾಲಯದ ಜೀರ್ಣೋದ್ಧಾರಕ್ಕಾಗಿ ಅಗೆಯುವಾಗ, ಪಾರ್ಶ್ವನಾಥ ಭಗವಾನ್ ಅವರ ಎರಡು ವಿಗ್ರಹಗಳು ಕಂಡುಬಂದಿವೆ.

 

 

ಚಂದ್ರಪ್ರಭು ದೇವಳದ ಗರ್ಭ ಗುಡಿಯಿಂದ ಸುಮಾರು ಐದು ಅಡಿ ಭೂಮಿ ಆಳ ಅಗೆದ ವೇಳೆ ಪ್ರತಿಮೆಯಂತಹ ಆಕೃತಿ ಕಾಣಸಿಕ್ಕಿದೆ.‌ ನಂತರ ನಿಧಾನ ಗತಿಯಲ್ಲಿ ಭೂಮಿಯನ್ನು ಭೂಮಿಯನ್ನು ಅಗೆದು ನೋಡಿದಾಗ ಅಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ ಸಿಕ್ಕಿದೆ. ಈ ಪ್ರತಿಮೆಯನ್ನು ಹೊರ ತೆಗೆದು ಮತ್ತೆ ಅದರ ಅಕ್ಕ-ಪಕ್ಕದಲ್ಲಿ ಮತ್ತಷ್ಟು ಭೂಮಿಯನ್ನು ಅಗೆದಾಗ ಅಲ್ಲಿ ಮತ್ತೊಂದು ಪ್ರತಿಮೆ ದೊರಕಿದ್ದು ಅದು ಕೂಡ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆಯೇ ಆಗಿದೆ.

ತಜ್ಞರ ಪ್ರಕಾರ ಈ ಎರಡು ಪ್ರತಿಮೆಗಳು ಸುಮಾರು 900 ವರ್ಷ ಹಳೆಯ ಅಂದರೆ 12 ಶತಮಾನದ ಪ್ರತಿಮೆಗಳಾಗಿರಬಹುದು ಎಂದು ಅಂದಾಜಿಸಿದ್ದಾರೆ. ಇನ್ನು ‌ಎರಡು ಪ್ರತಿಮೆಗಳ ಕೆಳಭಾಗದಲ್ಲಿ ಹಳೆಗನ್ನಡ ಅಕ್ಷರಗಳ ಸಾಲುಗಳನ್ನು ಕೆತ್ತಲಾಗಿದ್ದು, ಇದರ ಅಧ್ಯಯನ ಬಳಿಕ ಸ್ಪಷ್ಟವಾದ ಮಾಹಿತಿ ಲಭ್ಯವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ರಾಜ್ಯಸಭೆ ಸಂಸದ ಜಿಸಿ ಚಂದ್ರಶೇಖರ್ ಉನ್ನತ ಮಟ್ಟದ ಸಂಶೋಧನೆಗೆ ಆಗ್ರಹಿಸುದ್ದು ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಮಹಾರಾಷ್ಟ್ರದ ಹುಪರಿ ನಗರದಲ್ಲಿ 900 ವರ್ಷ ಹಳೆಯ ಜೈನ ಮೂರ್ತಿಗಳು ದೊರೆತಿದ್ದು, ಆ ಮೂರ್ತಿಗಳ ಮೇಲೆ ಇರುವ ಅಕ್ಷರಗಳು ಹಳಗನ್ನಡ ಭಾಷೆಯಲ್ಲಿವೆ. ನಾನು ಪುರಾತತ್ವ ಇಲಾಖೆಯೊಂದಿಗೆ ಮಾತನಾಡಿ, ಶಾಸನಗಳನ್ನು ಸರ್ಕಾರಿ ಕಾರ್ಯವಿಧಾನಗಳ ಮೂಲಕ ಓದಲು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇನೆ.” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top