fbpx
ಸಮಾಚಾರ

ಕೊವಿಡ್-19 ನೆಗೆಟಿವ್ ಆಗಿದ್ದರೂ ರಜೆಗೆ ತವರಿಗೆ ಬಂದಿರುವ ಯೋಧ ತನ್ನ ಜಮೀನಿನಲ್ಲೇ ಸ್ವಯಂ ಕ್ವಾರಂಟೈನ್

ದೇಶದಲ್ಲಿ ಕೊರೊನಾ ಮಹಾಮಾರಿ ತಾಂಡವವಾಡ್ತಿದೆ. ಹೀಗಿರುವಾಗ ಕ್ವಾರಂಟೀನ್ ಆಗಲು ಜನರು ಹಿಂದು ಮುಂದು ನೋಡ್ತಾರೆ. . ಆದ್ರೆ ಇಲ್ಲೊಬ್ಬ ಯೋಧ ಸ್ವಂತ ಜಮೀನಿನಲ್ಲೇ ಕ್ವಾರಂಟೈನ್ ಆಗಿದ್ದಾರೆ. ಹೌದು ದೇಶದ ಗಡಿ ಕಾಯೋ ಯೋಧನೊಬ್ಬ ಮರಳಿ ತನ್ನ ಊರಿಗೆ ಹಿಂದಿರುಗಿದ ನಂತರ ತನ್ನ ಜಮೀನಿನಲ್ಲೇ ಸ್ವಯಂ ಕ್ವಾರಂಟೈನ್​ ಆಗಿರೋ ಪ್ರಸಂಗ ಜಿಲ್ಲೆಯ ಅಂತೂರ ಬೆಂತೂರ ಗ್ರಾಮದಲ್ಲಿ ನಡೆದಿದೆ.

ಇದೇ ಜುಲೈ 3ರಂದು ಅರುಣಾಚಲ ಪ್ರದೇಶದಿಂದ ವಿಮಾನದ ಮೂಲಕ ಬಂದ ಯೋಧನಿಗೆ ಕೋವಿಡ್-19 ಟೆಸ್ಟ್ ಮಾಡಲಾಗಿತ್ತು. ವರದಿಯಲ್ಲಿ‌ ನೆಗೆಟಿವ್ ಬಂದಿತ್ತು. ಆದರೂ ಸಹ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗುವಂತೆ ಆರೋಗ್ಯ ಇಲಾಖೆ‌‌ ಸೂಚನೆ ನೀಡಿತ್ತು. ಆದರೆ ಯೋಧ ಅವಿಭಕ್ತ ಕುಟುಂಬ ಹಾಗೂ ಗ್ರಾಮಕ್ಕೆ ನನ್ನಿಂದ ತೊಂದರೆಯಾಗಬಾರದು ಎಂದು ಗ್ರಾಮದಿಂದ 2 ಕಿಲೋಮೀಟರ್ ದೂರದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದಾನೆ.

ಸರಕಾರದ ಮಾರ್ಗಸೂಚಿಯಂತೆ ತಮ್ಮ ಕ್ವಾರಂಟೈನ್ ಅವಧಿ ಪೂರೈಸಲು ಮುಂದಾಗಿದ್ದಾರೆ. ಸದ್ಯಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಯೋಧನ ಪರೀಕ್ಷೆ ನಡೆಸಿದ್ದಾರೆ. ಆದರೆ ಯೋಧನಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಕ್ವಾರಂಟೈನ್ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಮಾದರಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top