fbpx
ಸಮಾಚಾರ

ಕೊರೊನಾ ವೈರಸ್ ಸಂತ್ರಸ್ತರ ಸಹಾಯಕ್ಕಾಗಿ ಕನ್ನಡ ನಟಿಯಿಂದ 400 ಕಿಮೀ ರನ್ನಿಂಗ್

ಜಗತ್ತಿನಾದ್ಯಂತ ತಾಂಡವಾಡುತ್ತಿರುವ ಹೆಮ್ಮಾರಿ ಕೊರೊನಾ ವೈರಸ್ ಯಾವ ರೀತಿಯ ಅವಂತಾರ ಸೃಷ್ಟಿಸಿದೆ ಎಂಬುದು ತಿಳಿದೇ ಇದೆ. ಬಡವರು ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಸುಳಿಗೆ ಸಿಕ್ಕಿ ನಲುಗಿ ಹೋಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವು ನಟ, ನಟಿಯರು ಹಾಗೂ ಧನಿಕರು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುವುದಕ್ಕೆ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ನಟಿ ಸುಮನ್ ನಗರ್ ಕರ್ ಸಹ ಒಬ್ಬರು.

 

 

 

ಬೆಂಗಳೂರು ರನ್ನರ್ಸ್ ಆಯೋಜಿಸಿರುವ #Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್ ಕರ್, ತಮ್ಮ ಪತಿ ಗುರು ಜೊತೆಯಲ್ಲಿ ಭಾಗಿಯಾಗಿದ್ದಾರೆ. ಜುಲೈ ಒಂದರಿಂದ ಇಪ್ಪತ್ತರವರೆಗೆ, ಇಪ್ಪತ್ತು ದಿನಗಳ ಕಾಲ ಇಪ್ಪತ್ತು ರನ್ನರ್ಸ್ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡಿ ಈ ಮೂಲಕ ಹಣ ಸಂಗ್ರಹಣೆ ಮಾಡಿ, ಹಾಗೆ ಸಂಗ್ರಹಣೆಯಾದ ಹಣವನ್ನ ಬಡವರಿಗೆ, ದಿನಗೂಲಿಯವರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟಿನ ಮೂಲಕ ದಿನಸಿಗಳನ್ನ ಸರಬರಾಜು ಮಾಡಲಿದ್ದಾರೆ.

ಜುಲೈ 1ರಿಂದ ಆರಂಭವಾಗಿ 20ರವರೆಗೆ ನಡೆಯುತ್ತಿರುವ ಈ ಓಟದಲ್ಲಿ ಇಪ್ಪತ್ತು ದಿನಗಳ ಕಾಲ ಇಪ್ಪತ್ತು ಓಟಗಾರರು ಪ್ರತಿ ದಿನ ಇಪ್ಪತ್ತು ಕಿಲೋಮೀಟರ್ ಓಡಿ ನಿಧಿ ಸಂಗ್ರಹಿಸಲಿದ್ದಾರೆ. ಹಾಗೆ ಸಂಗ್ರಹಿಸಿದ ಹಣವನ್ನು ಬಡವರಿಗೆ, ದಿನಗೂಲಿಯವರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟ್‌ ಮೂಲಕ ದಿನಸಿಗಳನ್ನು ಸರಬರಾಜು ಮಾಡಲಿದ್ದಾರೆ. ಈ ಕಾರ್ಯಕ್ಕೆ ಸಹಾಯ ಮಾಡಬಯಸುವವರು ಫೇಸ್‌ಬುಕ್‌ನ Move2feed ಅಥವಾ ಸುಮನ್ ನಗರ್‌ಕರ್ ಅವರ ಫೇಸ್‌ಬುಕ್‌ ಪೇಜ್‌ನಲ್ಲೂ ಮಾಹಿತಿ ಪಡೆಯುವ ಅವಕಾಶವಿದೆ.

 

 

 

ಅಮೆರಿಕಾ ಹಾಗೂ ಬೆಂಗಳೂರಿನ ಹಲವಾರು ಮ್ಯಾರಥಾನ್ ರೇಸ್‌ಗಳಲ್ಲಿ ಸುಮನ್‌ ಭಾಗವಹಿಸಿದ್ದಾರೆ. ಈಗ ಇಪ್ಪತ್ತು ದಿನಗಳ, ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡುವ ಈ ಅಭಿಯಾನದ ಮೂಲಕ ಹಣ ಸಂಗ್ರಹ ಮಾಡಿ ಇದರಿಂದ ಕಷ್ಟದಲ್ಲಿ ಇರುವವರಿಗೆ ನೆರವಾಗುವ ಆಸೆ ಇವರದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top