fbpx
ಸಮಾಚಾರ

ಕನ್ನಡಕ್ಕೆ ಅವಹೇಳನ: ಪ್ರಶ್ನಿದಕ್ಕೆ “ಮುಚ್ಕೊಂಡ್ ಕೆಲಸ ನೋಡ್ಕೋ” ಅಂತೇಳಿ ವಿವಾದದಲ್ಲಿ ಸಿಲುಕಿದ ‘ಕಾಮಿಡಿ ಕಿಲಾಡಿ’ ನಯನಾ

ಕಾಮಿಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿ ಕನ್ನಡದ ಕೆಲವು ಚಿತ್ರಗಳಲ್ಲಿಯೂ ನಟಿಸಿರುವ ‘ನಯನಾ’ ಸದ್ಯ ವಿವಾದಕ್ಕೆ ಸಿಲುಕಿದ್ದಾರೆ. ಅದೂ ಕನ್ನಡದಲ್ಲಿ ಸ್ಟೇಟಸ್ ಹಾಕದ ಕಾರಣಕ್ಕೆ ಮತ್ತು ಪ್ರಶ್ನಿಸಿದವರಿಗೆ ಬೈದ ಕಾರಣಕ್ಕೆ.

 

 

ನಯನಾ ಅವ್ರು ನೆನ್ನೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹೊಸ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು. ಆ ಫೋಟೋಗೆ ವಿವರಣೆಯನ್ನು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದರು. ಅದಕ್ಕೆ ಒಬ್ಬರು ‘ಫೇಮಸ್ ಆಗೋತನಕ ಕನ್ನಡ ಬೇಕು. ಆದ್ಮೇಲೆ ಇಂಗ್ಲಿಷ್’ ಎಂದು ಅಸಮಾಧಾನ ವ್ಯಕ್ತಪಡಿಸಿ ಕಾಮೆಂಟ್ ಹಾಕಿದ್ದರು. ಅದಕ್ಕೆ ನಯನಾ, ‘ಅಪ್ಪಾ ಕನ್ನಡದ ಭಕ್ತ ಮುಚ್ಕೊಂಡ್ ನಿನ್ನ ಕೆಲಸ ನೋಡ್ಕೋ’ ಎಂದು ಪ್ರತಿಕ್ರಿಯಿಸಿದ್ದಾರೆ. ನಯನಾ ಅವರ ಈ ಪ್ರತಿಕ್ರಿಯೆ ಈಗ ವಿವಾದ ಸೃಷ್ಟಿಸಿದೆ.

ನಮ್ಮ ಕನ್ನಡದವರು ಎಂದು ಬೆಳೆಸಿದೆವು,ವೋಟ್ ಕೇಳಲು ನಾವು ಬೇಕಿತ್ತು ಆದರೆ ಯಾಕೆ ಮೇಡಂ ಹೀಗೆ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ ತಿರುಗಿ ಬಿದಿದ್ದಾರೆ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಯನಾ ಪರ ಮಾತನಾಡಿದ್ದಾರೆ ಮೇಡಂ ದಯವಿಟ್ಟು ಕ್ಷಮೆ ಕೇಳಿ. ನೀವು ಅವರನ್ನು ಅವಮಾನಿಸಿದ ರೀತಿಗೆ ನಿಮ್ಮ ಮೇಲೆ ಇದ್ದ ಗೌರವವೇ ಹೋಯ್ತು’ ಎಂದು ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top