ಮಹಾಮಾರಿ ಕೊರೊನಾ ವೈರಸ್ ನಮ್ಮ ದೇಶವನ್ನು ವಕ್ಕರಿಸಿದ ಬಳಿಕ ಅನೇಕ ಮಾನವೀಯ ಕಾರ್ಯಗಳನ್ನು ನಾವು ಕಂಡಿದ್ದೇವೆ. ಹಾಗೆಯೇ ಇದೀಗ ಕೇರಳದಲ್ಲಿ ಮಹಿಳೆಯೊಬ್ಬರು ಅಂಧ ವೃದ್ಧರೊಬ್ಬರಿಗೆ ಸಹಾಯ ಮಾಡಿರುವುದು ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಪ್ರತಿಫಲದ ನಿರೀಕ್ಷೆ ಇಲ್ಲದೆ ಅಸಹಾಯಕ ಅಂಧ ವೃದ್ಧರೊಬ್ಬರಿಗೆ ಈ ಹೃದಯವಂತೆ ಮಾಡಿದ ಸಹಾಯಕ್ಕೆ ಎಲ್ಲರೂ ಶಹಬ್ಬಾಸ್ ಎಂದಿದ್ದಾರೆ.
she made this world a better place to live.kindness is beautiful!😍
உலகம் அன்பான மனிதர்களால் அழகாகிறது#kindness #love pic.twitter.com/B2Nea2wKQ4
— Vijayakumar IPS (@vijaypnpa_ips) July 8, 2020
ಅಂಧರೊಬ್ಬರು ಬಸ್ ಏರಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಬಸ್ ಹೊರಡಲು ಆರಂಭಿಸಿದೆ. ಈ ಮಹಿಳೆ ಬಸ್ನ ಹಿಂದೆ ಓಡಿ ಬರುವುದರಿಂದ ಕಂಡೆಕ್ಟರ್ ಬಸ್ ನಿಲ್ಲಿಸುವಂತೆ ಚಾಲಕರಿಗೆ ಸೂಚಿಸಿದ್ದರು. ಬಸ್ ನಿಂತ ತಕ್ಷಣ ಕಂಡೆಕ್ಟರ್ ಬಳಿ ಓಡಿ ಬಂದ ಮಹಿಳೆ ಅದೇನೋ ಹೇಳಿ ಮರಳಿ ಸಾಗುತ್ತಾರೆ. ಹೀಗೆ ಹೋದವರೇ ಬರುವಾಗ ಅಂಧ ವೃದ್ಧರೊಬ್ಬರನ್ನು ಕೈಯಲ್ಲಿ ಕೈ ಹಿಡಿದು ಬಂದು ಬಸ್ ಹತ್ತಿಸಿ ತಾನು ಮರಳುತ್ತಾರೆ.
We should all aim to be like her when no one is watching. #Salute pic.twitter.com/8j1Ui3mwDZ
— Riteish Deshmukh (@Riteishd) July 9, 2020
ಸದ್ಯ ಈ ವಿಡಿಯೋ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೃದ್ಧರೊಬ್ಬರಿಗೆ ಸಹಾಯ ಮಾಡಲು ಈ ಹೃದಯವಂತೆ ತೋರಿದ ಉತ್ಸಾಹ ಎಲ್ಲರ ಹೃದಯವನ್ನು ಕರಗಿಸುವಂತಿದೆ. ಮಾನವೀಯತೆ ತೋರಿದ ಮಹಿಳೆ ತಿರುವಲ್ಲದಲ್ಲಿ ಸೇಲ್ಸ್ ವುವೆನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಪ್ರಿಯಾ ಎಂದು ಗುರುತಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
