fbpx
ಸಮಾಚಾರ

“ಹೆಂಗ್ ಪುಂಗ್ ಲೀ ಅಂತ ಕರೆಯಬೇಕಿರೋದು ಸೂಲಿಬೆಲೆ ಅವ್ರನ್ನಲ್ಲ, ಉಪೇಂದ್ರ ಅವರನ್ನು” ಮಾಜಿ DYSPಅನುಪಮಾ ಶೆಣೈ

ಮಾಜಿ ಡಿವೈಎಸ್ಪಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಅನುಪಮಾ ಶೆಣೈ ಅವರು ಅವರು ನಟ, ನಿರ್ದೇಶಕ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ಸರಣಿ ಟ್ವೀಟ್​ಗಳ ಮೂಲಕ ಕಿಡಿಕಾರಿದ್ದು, ಅನುಪಮಾ ಹಾಗೂ ಉಪೇಂದ್ರ ಅಭಿಮಾನಿಗಳ ನಡುವಿನ ಟ್ವೀಟ್ ಸಮರಕ್ಕೆ ನಾಂದಿ ಹಾಡಿದೆ.

ಆರಂಭದಲ್ಲಿ ಪ್ರಜಾಕೀಯದ ಬಗ್ಗೆ ಮಾತನಾಡುತ್ತಿದ್ದ ಅನುಪಮಾ ಶೆಣೈ ಅವರು ನಂತರ ಕೆಲವು ನೆಟ್ಟಿಗರು ಉಪೇಂದ್ರ ಅವರ ಬಗ್ಗೆ ಹೇಳತೊಡಗಿದಾಗ, ಉಪೇಂದ್ರ ಅವರ ಬಗ್ಗೆಯೂ ಕಿಡಿಕಾರಿದ್ರು. “ಉಪೇಂದ್ರರ ಸಿನೆಮಾಗಳೇ ಅವರ ಬಂಡವಾಳವನ್ನು ತಿಳಿಸುತ್ತದೆ. ‘ಓಂ’ ಅಂತ ಶಾಂತಿ ಮಂತ್ರದ ಹೆಸರಿಟ್ರು, ಚಿತ್ರದಲ್ಲಿದ್ದಿದ್ದು ಬರೀ ಹಿಂಸೆ!. ‘A’ ಅಂತ ಹೆಸರಿಟ್ರು, ಪಡ್ಡೆ ಹುಡುಗರೆಲ್ಲ ಬ್ಲೂಫಿಲ್ಮ್ ಗೆ ಕಾದು ಕೊನೆಗೆ ‘ಏನಿಲ್ಲ ‘ ಅನ್ನುವಂತಾಯಿತು!. ಅದೇ ರೀತಿ ‘ಪ್ರಜಾಕೀಯ’. ಅದಕ್ಕಿಂತ ದೊಡ್ಡ ಮೋಸ ಮತ್ತೊಂದಿರೋದಿಲ್ಲ ಕಾದುನೋಡಿ” ಎಂದು ಟ್ವೀಟ್ ಮಾಡಿದ್ದಾರೆ.

 

 

ಅನುಪಮಾ ಶೆಣೈ ಅವರ ಟ್ವೀಟ್‌ಗೆ ಕಮೆಂಟ್ ಮಾಡಿದ ವ್ಯಕ್ತಿಯೊಬ್ಬ, ಚಕ್ರವರ್ತಿ ಸೂಲಿಬೆಲೆಯವರನ್ನ ಎಳೆತಂದ. ಹಾಗೇ ಸಮರ ಮುಂದುವರಿಯುತ್ತಿದ್ದಂತೆ. ಚಕ್ರವರ್ತಿ ಸೂಲಿಬೆಲೆ ಹಾಗೂ ಉಪೇಂದ್ರ ಅವರನ್ನ ಹೋಲಿಸಿದ ಶೆಣೈ ಅವರು, ರಿಯಲ್ ಸ್ಟಾರ್ ಅಲ್ಲ, ರಿಯಲ್ ಹೆಂಗ್ ಪುಂಗ್ ಲೀ ಎಂದು ಉಪೇಂದ್ರರನ್ನ ಕರೆದರು.

 

 

ಉಪ್ಪಿ ಅಭಿಮಾನಿಗಳ ಈ ಟ್ವೀಟ್ ಗಳಿಗೆ ಉತ್ತರಿಸುತ್ತಾ ಅನುಪಮಾ ಅವರು, ಉಪೇಂದ್ರ ಅವರನ್ನು ನಿಜವಾದ ಹೆಂಗ್ ಪುಂಗ್ ಲೀ ಎಂದು ಕರೆದಿದ್ದಾರೆ. ತಮ್ಮ ಟ್ವೀಟ್ ನಲ್ಲಿ, “ನಿಜವಾಗಿಯೂ #ಹೆಂಗ್_ಪುಂಗ್_ಲೀ ಅಂತ ಕರೆಯಬೇಕಾಗಿರೋದು ಚಕ್ರವರ್ತಿ ಸೂಲಿಬೆಲೆಯವರನ್ನಲ್ಲ, ಉಪೇಂದ್ರ ಅವರನ್ನು!!”

 

 

“ಚಕ್ರವರ್ತಿ ಸೂಲಿಬೆಲೆಯವರು ಏನೇ ಮಾತಾಡಿದ್ರೂ ತರ್ಕಬದ್ಧವಾಗಿ ಮಾತಾಡ್ತಾರೆ. ಉಪೇಂದ್ರ ಹೇಳುವ ಮಾತುಗಳಲ್ಲಿ ತರ್ಕವೂ ಇಲ್ಲ, ಬದ್ಧತೆಯೂ ಇಲ್ಲ! ರಿಯಲ್ ಸ್ಟಾರ್ ಅಲ್ಲ, ರಿಯಲ್_ಹೆಂಗ್_ಪುಂಗ್_ಲೀ!” ಎಂದು ಟ್ವೀಟ್ ಮಾಡಿದ್ದಾರೆ.

 

 

ಪ್ರಜಾಕೀಯ ವಿರುದ್ಧ ಅನುಪಮಾ ಸಾಲು ಸಾಲು ಟ್ವೀಟ್ ಗಳನ್ನು ಮಾಡಿದ್ದಾರೆ. “ಕೊರೊನಾಗೂ ಪ್ರಜಾಕೀಯಕ್ಕೂ ಇರುವ ವ್ಯತ್ಯಾಸ. ಕೊರೊನಾ ಬರದಂತೆ ತಡೆಗಟ್ಟಲು ಮಾಸ್ಕ್ ಹಾಕಿಕೊಳ್ಳಬೇಕು. ಪ್ರಜಾಕೀಯ ಸಭ್ಯತೆ, ಒಳ್ಳೆಯತನದ ಮಾಸ್ಕ್ (ಮುಖವಾಡ) ಧರಿಸಿಕೊಂಡು ನಮ್ಮ ಹತ್ರ ಬರ್ತಾ ಇದೆ. ಎರಡೂ ಅಪಾಯಕಾರಿ. ಇಬ್ಬರ ಬಗ್ಗೆಯೂ ಎಚ್ಚರಿಕೆಯಿಂದಿರಿ.” ಎಂದಿದ್ದಾರೆ. ಅನುಪಮಾ ಸಾಲು ಸಾಲು ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದಾರೆ. ಅನುಪಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

 

ಪಬ್-ಜಿ ಮತ್ತು ಪ್ರಜಾಕೀಯ ಎರಡೂ ಜಾಲತಾಣದಲ್ಲಿ ನಡೆಯುತ್ತಿರುವ ಜನಪ್ರಿಯ ಆಟಗಳು. ಎರಡರಿಂದಲೂ ಯುವಜನತೆಯ ಟೈಮ್ ವೇಸ್ಟ್. ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬುರುಡೆ ಬಿಡೋದನ್ನು ರಾಜಕೀಯವಾಗಿ ಕಾಂತ್ರಿ ಅಂತ ಭಾವಿಸೋದೂ ಪಬ್-ಜಿಯಲ್ಲಿ ಆಡಿದ್ದೇ ನಿಜವಾದ ಯುದ್ಧ ಅಂತ ಭಾವಿಸೋದು ಎರಡೂ ಒಂದೆ ಎಂದು ಅಭಿಮಾನಿಗಳ ವಿರುದ್ಧ ಅನುಪಮಾ ಕಿಡಿಕಾರಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top