fbpx
ಸಮಾಚಾರ

ಗಿನ್ನಿಸ್ ದಾಖಲೆ ಸೇರಿದ ಭಾರತದ ಹುಲಿ ಸಮೀಕ್ಷೆ

ಭಾರತದಲ್ಲಿ 2018ರಲ್ಲಿ ನಡೆಸಿದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪ್ ಹುಲಿ ಸಮೀಕ್ಷೆ ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದೆ. 26,760 ವಿವಿಧ ಸ್ಥಳಗಳಲ್ಲಿ 35 ಮಿಲಿಯನ್ ಫೋಟೋ ತೆಗೆಯಲಾಗಿದೆ.

ಟ್ವೀಟರ್ ಮೂಲಕ ವಿಷಯ ಹಂಚಿಕೊಂಡ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಅವರು, ಇದು ”ಆತ್ಮನಿರ್ಭರ್ ಭಾರತ”ದ ಪರಿಕಲ್ಪನೆಗೆ ನಿಜವಾದ ಉದಾಹರಣೆ ಎಂದಿದ್ದಾರೆ.

ದೇಶದ ಹುಲಿ ಜನಗಣತಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದೆ ಮತ್ತು ನಿಗದಿತ ಗುರಿಗಿಂತ ನಾಲ್ಕು ವರ್ಷಗಳ ಮೊದಲೇ ನಾವು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಸಂಕಲ್ಪವನ್ನು ಪೂರೈಸಿದ್ದೇವೆ ಎಂದರು.

ವಿಶ್ವ ಹುಲಿ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು 2018 ನೇ ಅಖಿಲ ಭಾರತ ಹುಲಿ ಗಣತಿಯ ನಾಲ್ಕನೇ ಆವೃತ್ತಿ ಫಲಿತಾಂಶವನ್ನು ಪ್ರಕಟಿಸಿದ್ದರು. ಭಾರತದಲ್ಲಿ ಒಟ್ಟು 2,967 ಹುಲಿಗಳು ಇರುವುದು ಸರ್ವೆಯಲ್ಲಿ ತಿಳಿದುಬಂದಿದೆ. ಇದು ಜಗತ್ತಿನಲ್ಲಿರುವ ಶೇಕಡಾ 75 ರಷ್ಟು ಹುಲಿಗಳ ಸಂತತಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top