fbpx
ಸಮಾಚಾರ

ಕೇಂದ್ರ ಮಂತ್ರಿಗಳ ಹೆಸರನ್ನು ಕನ್ನಡದಲ್ಲೇ ಬರೆದು ಪತ್ರ ವ್ಯವಹಾರ: ಸಂಸದ ಜಿಸಿ ಚಂದ್ರಶೇಖರ್ ನಡೆಗೆ ವ್ಯಾಪಕ ಕನ್ನಡಿಗರಿಂದ ಮೆಚ್ಚುಗೆ

ತಾವು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಕ್ಷಣದಿಂದಲೂ ಒಂದರ ಹಿಂದೊಂದು ಕರ್ನಾಟಕ, ಕನ್ನಡ ಮತ್ತು ಕನ್ನಡಿಗರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಧ್ವನಿಯೆತ್ತುವ ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಇದೀಗ ಮತ್ತೊಮ್ಮೆ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

 

ಸಂಸತ್ ನಲ್ಲಿ ಮಾತನಾಡುವಾಗಲೆಲ್ಲಾ ಕನ್ನಡದಲ್ಲೇ ಮಾತನಾಡುವ ಜಿಸಿ ಚಂದ್ರಶೇಖರ್ ಈಗ ತಮ್ಮ ಪತ್ರ ವ್ಯವಹಾರದಲ್ಲೂ ಕನ್ನಡತನವನ್ನು ಮೆರೆಸಿದ್ದಾರೆ. ಕೊರೋನಾ ವೈರಸ್ ಪರಿಣಾಮದಿಂದಾಗಿ ಹಲವು ದೇಶಗಳು ಲಾಕ್’ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಈ ನಿಯಮಗಳಿಂದಾಗಿ ಹೊರ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರು ಭಾರತಕ್ಕೆ ಬರಲು ಸಮಸ್ಯೆಯಾಗುತ್ತಿದೆ. ಈ ಮದ್ಯೆ ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಸಂಕಷ್ಟಕ್ಕೆ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮಿಡಿದಿದ್ದಾರೆ.

ರಷ್ಯಾದಲ್ಲಿ ಸಿಲುಕಿರುವ ಹಲವಾರು ಕನ್ನಡಿಗರನ್ನು ಭಾರತಕ್ಕೆ ಮರಳಿ ಕರೆತರಬೇಕೆಂದು ಸಂಸದ ಚಂದ್ರಶೇಖರ್ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಪತ್ರ ಬರೆದಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಕನ್ನಡದಲ್ಲಿಯೇ ಬರೆದಿದ್ದರು. ಅಷ್ಟೇ ಅಲ್ಲದೆ ‘ಅವರೇ’ ಎಂಬ ಅನ್ವರ್ಥನಾಮವನ್ನು ಬಳಸಿ ಕನ್ನಡತನ ಮೆರೆದಿದ್ದಾರೆ.

 

 

ಸಾಮಾನ್ಯವಾಗಿ ಬಹುತೇಕ ರಾಜಕಾರಣಿಗಳೇ ಕರ್ನಾಟಕಕ್ಕೆ ಸಂಭಂದಪಟ್ಟ ಸಮಸ್ಯೆ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಅಥವಾ ಪ್ರಧಾನಿಗಳಿಗೆ ಪತ್ರ ಬರೆದರೆ, ಅಲ್ಲಿ ‘ಜೀ’ ಅಥವಾ ‘ಸರ್’ ಎಂಬ ಪದಗಳಿಂದ ಸಂಭೋದಿಸುತ್ತಾರೆ. ಆದರೆ ಈ ವಿಚಾರದಲ್ಲಿ ಕೂಡ ಕನ್ನಡತನ ಇರಬೇಕು ಎಂದು ಚಂದ್ರಶೇಖರ್ ಅವರು ‘ಅವರೇ’ ಎಂಬ ಪದವನ್ನು ಪತ್ರಗಳಲ್ಲಿ ಹೆಚ್ಚೆಚ್ಚು ಬಳಸುತ್ತಿದ್ದಾರೆ. ಸಂಸದರ ಟ್ವೀಟ್ ಗಳಿಗೆ ಪ್ರತಿಕ್ರಿಯೆ ನೀಡುತ್ತಿರುವ ಅನಿವಾಸಿ ಕನ್ನಡಿಗರು ಕೂಡ ‘ಸರ್’ ಅಥವಾ ‘ಜೀ’ ಬದಲು ‘ಅವರೇ’ ಅಥವಾ ‘ಅವರು’ ಎಂದು ಸಂಭೋದಿಸಲು ಪ್ರಾರಂಭಿಸಿದ್ದಾರೆ.

 

 

ಈಗಿನ ರಾಜಕಾರಣಿಗಳು ಸಾಧ್ಯವಾದಷ್ಟು ಕಡೆಗಳಲ್ಲಿ ಕನ್ನಡ ಬಳಸಿದರೆ ತಾನೇ ಮುಂದಿನ ಪೀಳಿಗೆಯೂ ಕನ್ನಡಾಭಿಮಾನವನ್ನು ವೃದ್ಧಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನೋಡಿದರೆ ಜಿಸಿ ಚಂದ್ರಶೇಖರ್ ಅವರನ್ನು ಇತರ ರಾಜಕಾರಣಿಗಳು ಸಹ ಅನುಸರಿಸಬೇಕು ಕನ್ನಡತನ ಎಲ್ಲೆಲ್ಲೂ ರಾಜಾಜಿಸುವಂತೆ ಮಾಡಬೇಕು.

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top