fbpx
ಸಮಾಚಾರ

ಕಾರ್ಪೊರೇಟರ್ ಅಣ್ಣನ ಮಗನ ಕೊಲೆ ಕೇಸ್ ನಲ್ಲಿ ಟಿಕ್‍ಟಾಕ್ ಸ್ಟಾರ್ ನವೀನ್ ಬಂಧನ

ಕೊಲೆ ಮಾಡಿರುವ ಪ್ರಕರಣದಲ್ಲಿ ಟಿಕ್‍ಟಾಕ್ ಸ್ಟಾರ್ ನವೀನ್ ಸೇರಿದಂತೆ ನಾಲ್ವರು ಪೊಲೀಸರಿಗೆ ಶರಣಾಗಿದ್ದಾರೆ. ಬುಧವಾರ ಕಗ್ಗಲಿಪುರ ಬಳಿ ಕಾರ್ಪೋರೇಟರ್ ಸೋಮಣ್ಣನ ಅಣ್ಣನ ಮಗ ವಿನೋದ ಎಂಬುವವನ ತಲೆ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಟಿಕ್‍ಟಾಕ್ ಸ್ಟಾರ್ ನವೀನ್ ಅಲಿಯಾಸ್ ಸ್ಮೈಲ್ ನವೀನ್ ಮತ್ತು ರೌಡಿ ಶೀಟರ್ ಮಂಜೇಶ್ ಕುಮಾರ್ ಅಲಿಯಾಸ್ ಅವಲಹಳ್ಳಿ ಮಂಜ ಸೇರಿದಂತೆ ನಾಲ್ವರು ಪೊಲೀಸರಿಗೆ ಶರಣಾಗಿದ್ದಾರೆ.

2013ರಲ್ಲಿ ಬಂಧಿತ ಆರೋಪಿ ಮಜೇಂಶ್​​​ನ ಗುರು, ತಲಘಟ್ಟಪುರ ರೌಡಿಶೀಟರ್ ಕೆಂಬತ್ತಹಳ್ಳಿ ಪರಮೇಶ್​​ನನ್ನು ವಿನೋದ್ ಗ್ಯಾಂಗ್ ಕೊಲೆ ಮಾಡಿತ್ತು. ಪರಮೇಶನನ್ನು ನಾಗ ಮತ್ತವನ ತಂಡ ಕೊಲೆ ಮಾಡಿತ್ತು. ಇದಕ್ಕೆ ವಿನೋದ್ ಹಣ ಸಹಾಯ ಮಾಡಿದ್ದ. ಈ ಕೊಲೆಯ ಪ್ರತಿಕಾರವಾಗಿ ಮಂಜ, ನಾಗ ಮತ್ತು ಅವನ ಸ್ನೇಹಿತನ್ನು ಡಬಲ್ ಮರ್ಡರ್ ಮಾಡಿ ಜೈಲು ಸೇರಿದ್ದ. ಕಳೆದ ಐದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ.

ತನ್ನ ಗುರು ಪರಮೇಶ್ ನ‌ ಕೊಲೆಗೆ ವಿನೋದ್ ಹಣ ಸಹಾಯ ಮಾಡಿದ ಎಂದು ಮಂಜೇಶ್​​ಗೆ ದ್ವೇಷವಿತ್ತು. ಹೀಗಾಗಿ ತನ್ನ ಜೊತೆ ಪುಡಿ ರೌಡಿಯಾಗಿದ್ದ ಸ್ಮೈಲ್ ನವೀನನ್ನು ಸೇರಿಸಿಕೊಂಡು ವಿನೋದ್ ಕೊಲೆಗೆ ಸ್ಕೆಚ್ ಹಾಕಿದ್ದಾನೆ. ಕಗ್ಗಲಿಪುರದಲ್ಲಿ ಒಬ್ಬನೇ ಬರುತ್ತಿದ್ದ ವಿನೋದ್‍ನನ್ನು ಅಡ್ಡಿಗಟ್ಟಿದ್ದ ಬ್ಯಾಟ್ ಹಾಗೂ ಆಯುಧಗಳಿಂದ ಆತನನ್ನು ಕೊಚ್ಚಿ, ತಲೆಯನ್ನು ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top