ಸ್ಥಳ- ಬೆಂಗಳೂರು.
ಭಾನುವಾರ, ಜುಲೈ 12, 2020
ಸೂರ್ಯೋದಯ: 6:59am
ಸೂರ್ಯಾಸ್ತ: 6:50pm
ಶಕ ಸಂವತ : 1942 ವಿಲಂಬಿ
ಅಮಂತ ತಿಂಗಳು: ಆಷಾಢ
ಪಕ್ಷ : ಕೃಷ್ಣಪಕ್ಷ
ತಿಥಿ : ಸಪ್ತಮೀ 15:47
ನಕ್ಷತ್ರ: ಉತ್ತರಾ ಭಾದ್ರ 08:18
ಯೋಗ: ಅತಿಗಂಡ 21:52
ಕರಣ: ಬಾವ 15:47 ಬಾಲವ 28:58
ಅಭಿಜಿತ್ ಮುಹುರ್ತ: 11:59 am – 12:50 pm
ಅಮೃತಕಾಲ :ಯಾವುದು ಇಲ್ಲ
ರಾಹುಕಾಲ- 5:11 pm – 6:46 pm
ಯಮಗಂಡ ಕಾಲ- 12:25 pm – 2:00 pm
ಗುಳಿಕ ಕಾಲ- 3:35 pm – 5:11 pm
ಮೇಷ (Mesha)
ಸಾಂಸಾರಿಕವಾಗಿ ಸಮಸ್ಯೆಗಳನ್ನು ನೀವೆ ಪರಿಹರಿಸುವುದು ಉತ್ತಮ. ಶುಭಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ. ಯೋಗ್ಯ ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಒದಗಿ ಬರಲಿದೆ.
ವೃಷಭ (Vrushabh)
ಬೌದ್ಧಿಕ ಚರ್ಚೆ ಮತ್ತು ಯೋಜನೆಗಳು ಅಥವಾ ಕ್ರಿಯಾತ್ಮಕ ಬರಹಗಳಲ್ಲಿ ತೊಡಗಿಕೊಳ್ಳುವ ಮೂಲಕ ಇಂದು ಕ್ರಿಯಾತ್ಮಕ ಮತ್ತು ವಿಶ್ಲೇಷಣಾತ್ಮಕ ಅರ್ಹತೆಗಳನ್ನು ಪೋಷಿಸುವ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಯಾವುದೇ ಯೋಜನೆಗಳನ್ನು ಹೊಂದಿದ್ದಲ್ಲಿ, ಅದನ್ನು ಕಾರ್ಯರೂಪಗೊಳಿಸಲು ಇದು ತಕ್ಕುದಾದ ಸಮಯ, ನೀವು ಕೈಗೊಳ್ಳುವ ಯಾವುದೇ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ.
ಮಿಥುನ (Mithuna)
ಆಗಾಗ ಹಣದ ಅಡಚಣೆಯಿಂದ ಕಾರ್ಯಸಾಧನೆಗೆ ಅಡ್ಡಿಯಾದೀತು. ಮುಖ್ಯವಾಗಿ ದೇಹಾರೋಗ್ಯ ವಾಹನ ಚಾಲನೆಯ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿರಿ. ವೃತ್ತಿಯಲ್ಲಿ ಕಿರಿಕಿರಿ ಇದೆ.
ಕರ್ಕ (Karka)
ಮನೆಯಲ್ಲಿನ ವಾತಾವರಣವು ಮುಂಜಾನೆಯ ವೇಳೆ ಲವಲವಿಕೆಯಿಂದಿರುತ್ತದೆ ಮತ್ತು ಇದು ನಿಮ್ಮನ್ನು ಮಧ್ಯಾಹ್ನದವರೆಗೆ ಉಲ್ಲಾಸ ಹಾಗೂ ಉತ್ಸಾಹದಲ್ಲಿರಿಸುತ್ತದೆ. ಮಧ್ಯಾಹ್ನದ ಬಳಿಕ ಸ್ವಲ್ಪ ಅಡೆತಡೆಗಳು ಉಂಟಾಗುವ ಸಾಧ್ಯತೆಯಿದೆ. ಮತ್ತು ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಸಿಂಹ (Simha)
ಧನಾತ್ಮಕವಾಗಿ ಚಿಂತಿಸಿ, ಆರೋಗ್ಯ ವಿಚಾರಕ್ಕೆ ಸಂಬಂಧಿಸಿದ ನಿರಾತಂಕವನ್ನು ತಪ್ಪಿಸಿ ಮತ್ತು ನಿಮ್ಮ ದುರಾಕ್ರಮಣ ಪ್ರವೃತ್ತಿಯನ್ನು ತೊಲಗಿಸಿ. ನಿಮ್ಮ ಖರ್ಚು ಮತ್ತು ಹೂಡಿಕೆಯ ಮೇಲೆ ನೀವು ಕಣ್ಣಿಟ್ಟಿರಬೇಕಾಗುತ್ತದೆ ಇಲ್ಲವಾದಲ್ಲಿ, ನೀವು ಆರ್ಥಿಕ ನಷ್ಟಕ್ಕೆ ಒಳಗಾಗುವಿರಿ. ಆದರೂ, ಭವಿಷ್ಯದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ದಿನ.
ಕನ್ಯಾರಾಶಿ (Kanya)
ಧನಾಗಮನದಿಂದ ನಿಮ್ಮ ಮನೋಕಾಮನೆಗಳು ಸಿದ್ಧಿಸಲಿವೆ. ಕೆಟ್ಟು ಹೋದ ಸಾಂಸಾರಿಕ ಸಮಸ್ಯೆಗಳನ್ನು ಬಗೆ ಹರಿಸಲು ಇದು ಸಕಾಲ. ಮುಂದುವರಿ ಯಿರಿ. ನಿರುದ್ಯೋಗಿಗಳಿಗೆ ಉತ್ತಮ ಭಾಗ್ಯ ಸಿಕ್ಕೀತು.
ತುಲಾ (Tula)
ಆತ್ಮೀಯರೊಂದಿಗೆ ವ್ಯವಹರಿಸುವಾಗಲೂ ಎಚ್ಚರಿಕೆ ಅಗತ್ಯ. ಹೆಣ್ಣುಮಕ್ಕಳಿಗೆ ಉತ್ತಮ ಸಂಬಂಧದ ನಿರೀಕ್ಷೆ. ವಾಹನ, ವಸ್ತುಗಳ ಖರೀದಿಗೆ ಸಕಾಲ. ಸೋದರರಿಂದ ಸಕಾಲಿಕ ನೆರವು ದೊರಕಲಿದೆ.
ವೃಶ್ಚಿಕ (Vrushchika)
ವಿವಿಧ ರೂಪದ ಧನಾಗಮನದಿಂದ ನಿಮ್ಮ ಮನೋಕಾಮನೆಗಳು ನೆರವೇರಲಿವೆ. ಸಾಂಸಾರಿಕವಾಗಿ ಶುಭಮಂಗಲ ಕಾರ್ಯಗಳ ಚಿಂತನೆ ಕಾರ್ಯಗತವಾಗಲಿದೆ. ನ್ಯಾಯಾಲಯದಲ್ಲಿ ಯಶಸ್ಸು.
ಧನು ರಾಶಿ (Dhanu)
ಆಗಾಗ ಹಣದ ಅಡಚಣೆಯಿಂದ ಕಾರ್ಯಸಾಧನೆಗೆ ಅಡ್ಡಿಯಾದೀತು. ಮುಖ್ಯವಾಗಿ ದೇಹಾರೋಗ್ಯ ವಾಹನ ಚಾಲನೆಯ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿರಿ. ವೃತ್ತಿಯಲ್ಲಿ ಕಿರಿಕಿರಿ ಇದೆ.
ಮಕರ (Makara)
ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು. ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ. ಯೋಜಿತ ಕಾರ್ಯಗಳಲ್ಲಿ ಜಯ ಕಾಣುವಿರಿ.
ಕುಂಭರಾಶಿ (Kumbha)
ಆಸ್ತಿ ವಿವಾದಗಳಿಂದ ಮುಕ್ತಿಯ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಬಹುದು. ಕುಲದೇವತಾ ಸೇವೆಯಿಂದ ನಿಯೋಜಿತ ಕೆಲಸಗಳು ಪೂರ್ಣಗೊಳ್ಳುವವು.
ಮೀನರಾಶಿ (Meena)
ವೃತ್ತಿರಂಗದಲ್ಲಿ ಮುನ್ನಡೆಯ ದಿನಗಳಿವು. ನಿರೀಕ್ಷಿತ ಕಾರ್ಯಸಾಧನೆ ಯಿಂದ ಸಂಭ್ರವಿಸು ವಂತಾದೀತು. ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ ಆಗಾಗ ಧನಾಗಮನದಿಂದ ಕಾರ್ಯಸಾಧನೆಯಾದೀತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
