fbpx
ಸಮಾಚಾರ

ಇಪ್ಪತ್ತು ವರ್ಷದಿಂದ ದರ್ಶನ್ ಮೇಕಪ್ ಮ್ಯಾನ್ ಆಗಿದ್ದ ಶ್ರೀನಿವಾಸ್ ಸಾವು: ಕಂಬನಿ ಮಿಡಿದ ಡಿ ಬಾಸ್

ಸ್ಯಾಂಡಲ್‌ವುಡ್‌ನ ಮೇಕಪ್‌ ಮ್ಯಾನ್‌ ಶ್ರೀನಿವಾಸ್‌ ನಿಧನರಾಗಿದ್ದಾರೆ. ನಟ ದರ್ಶನ್ ಅವರಿಗೆ ಆಪ್ತರಾಗಿದ್ದ ಅವರು ಹಲವು ವರ್ಷಗಳಿಂದ ಮೇಕಪ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. ದರ್ಶನ್‌ ಅವರ ಆಪ್ತವಲಯದಲ್ಲೇ ಸೀನ ಎಂದೇ ಗುರುತಿಸಿಕೊಂಡಿದ್ದ ಶ್ರೀನಿವಾಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

 

 

ಮೇಕಪ್ ಆರ್ಟಿಸ್ಟ್ ಆಗಿ ಒಳ್ಳೆಯ ಹೆಸರು ಪಡೆದುಕೊಂಡಿದ್ದ ಶ್ರೀನಿವಾಸ್ ಅವರು ದರ್ಶನ್ ಅವರ ಬಹುತೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಬಿಡುಗಡೆಗೆ ಸಿದ್ಧವಾಗಿರುವ ರಾಬರ್ಟ್ ಚಿತ್ರಕ್ಕೂ ಕೆಲಸ ಶ್ರೀನಿವಾಸ್ ಕೆಲಸ ಮಾಡಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿರುವ ನಟ ದರ್ಶನ್,​ ‘ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top