fbpx
ಸಮಾಚಾರ

ಇನ್ನು ಮುಂದೆ ಕೊವಿಡ್ 19 ಔಷಧಿ ಬೆಲೆ ಮಾತ್ರೆಯೊಂದಕ್ಕೆ 75 ರೂ ಮಾತ್ರ!

ಕೊರೋನಾ ಚಿಕಿತ್ಸೆಗೆ ಬಳಸಲಾಗುವ ಫೆವಿಪಿರವಿರ್‌ ಮಾತ್ರೆಯ ದರವನ್ನು ಶೇ.27ರಷ್ಟುಇಳಿಕೆ ಮಾಡಿದ್ದಾಗಿ ಔಷಧ ಉತ್ಪಾದಕ ಸಂಸ್ಥೆ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್‌ ಹೇಳಿದೆ. ಇದರನ್ವಯ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೊರೋನಾ ಸೋಂಕಿತರಿಗಾಗಿ ಬಿಡುಗಡೆ ಮಾಡಿರುವ ಫ್ಯಾಬಿಫ್ಲು ಹೆಸರಿನ ಮಾತ್ರೆಯ ಬೆಲೆಯನ್ನು 103 ರು.ನಿಂದ 75 ರು.ಗೆ ಇಳಿಕೆ ಮಾಡಲಾಗಿದೆ.

ಉಚ್ಚ ಗುಣಮಟ್ಟದ ಈಲ್ದ್ ಹಾಗೂ ಉತ್ತಮ ಸ್ಕೇಲ್ ನಲ್ಲಿ ಸಿಕ್ಕ ಲಾಭದ ಹಿನ್ನೆಲೆ ಈ ಬೆಲೆ ಇಳಿಕೆ ಮಾಡಲಾಗಿದೆ ಎಂದು ಕಂಪನಿ ತನ್ನ ಫೈಲಿಂಗ್ ನಲ್ಲಿ ತಿಳಿಸಿದೆ. ಆಕ್ಟಿವ್ ಫಾರ್ಮಾಸ್ಯೂಟಿಕಲ್ ಇನ್ಗ್ರಿಡಿಯಂಟ್ಸ್ (API) ಹಾಗೂ ಫಾರ್ಮುಲೆಶನ್ ಗಳು ಭಾರತದ ಗ್ಲೆನ್ ಮಾರ್ಕ್ ಫೆಸಿಲಿಟಿಗಳಲ್ಲಿ ಸಿದ್ದಪಡಿಸಲಾಗಿದೆ. ಇದರಿಂದ ಸಿಕ್ಕ ಲಾಭವನ್ನು ದೇಶದ ರೋಗಿಗಳಿಗೆ ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

 

ಫ್ಯಾಬಿಫ್ಲೂ ಮಾತ್ರೆ ಬೆಲೆ ರಷ್ಯಾದಲ್ಲಿ ಒಂದಕ್ಕೆ 600 ರುಪಾಯಿ ಇದ್ದರೆ, ಜಪಾನ್ ನಲ್ಲಿ 378, ಬಾಂಗ್ಲಾದೇಶ್ ನಲ್ಲಿ 350 ಹಾಗೂ ಚೀನಾದಲ್ಲಿ 215 ರುಪಾಯಿ ಇದೆ. ಅಲ್ಲಿಗೆ ಹೋಲಿಸಿದರೆ ಭಾರತದಲ್ಲಿ ದರ ವಿಪರೀತ ಕಡಿಮೆ ಇದೆ ಎಂದು ಕಂಪೆನಿ ಹೇಳಿದೆ. ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಕಳೆದ ತಿಂಗಳು ಗ್ಲೆನ್ ಮಾರ್ಕ್ ನ ಜೆನರಿಕ್ ಬ್ರ್ಯಾಂಡ್ Favipiravirಗೆ ಅನುಮತಿ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top