fbpx
ಸಮಾಚಾರ

ಸಂಸದ ಜಿಸಿ ಚಂದ್ರಶೇಖರ್ ಪ್ರಯತ್ನದ ಫಲವಾಗಿ ಕೊನೆಗೂ ತಾಯ್ನಾಡಿಗೆ ಬಂದಿಳಿದ ರಷ್ಯಾದಲ್ಲಿ ಸಿಲುಕಿದ್ದ ಕನ್ನಡಿಗರು

ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ರಷ್ಯಾದಲ್ಲಿ ಸಿಲುಕಿದ್ದ ಕನ್ನಡ ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ ಕರೆತಂದಿದ್ದಾರೆ. ಕೇವಲ ಕನ್ನಡಿಗ ವಿದ್ಯಾರ್ಥಿಗಳು ಮಾತ್ರವಲ್ಲದೆ ಗೋವಾ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳನ್ನು ಕೂಡ ಕರೆತಂದಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊರೋನಾ ವೈರಸ್ ಪರಿಣಾಮದಿಂದಾಗಿ ಹಲವು ದೇಶಗಳು ಲಾಕ್’ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಈ ನಿಯಮಗಳಿಂದಾಗಿ ಹೊರ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರು ಭಾರತಕ್ಕೆ ಬರಲು ಸಮಸ್ಯೆಯಾಗುತ್ತಿದೆ. ಅಲ್ಲಿರಲಾಗದೆ, ಇಲ್ಲಿಗೆ ಬರಲು ಅವಕಾಶವಿಲ್ಲದೆ ಅತಂತ್ರರಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈ ಮದ್ಯೆ ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಸಂಕಷ್ಟಕ್ಕೆ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮಿಡಿದಿದ್ದಾರೆ.

ಜಿ.ಸಿ ಚಂದ್ರಶೇಖರ್ ರವರು ವಿದೇಶಾಂಗ ವ್ಯವಹಾರ ಸಮಿತಿಯ ಸದಸ್ಯರಾಗಿರುವುದರಿಂದ ಅವರ ಮಾಧ್ಯಮ ಮುಖೇನ ಅಥವಾ ಯಾರೇ ಅವರ ಗಮನಕ್ಕೆ ತಂದರು ಅವರ ಕೈಲಾದ ಮಟ್ಟಿಗೆ ಕನ್ನಡಿಗರನ್ನು ಸ್ವದೇಶಕ್ಕೆ ಕರೆತರಲು ಪ್ರಯತ್ನ ಮಾಡುವುದಾಗಿ ಹೇಳಿದ್ದರು. ಅದರಂತೆ ಈಗಾಗಲೇ ಮಲೇಶಿಯಾದಿಂದ ಮತ್ತು ರಷ್ಯಾದಿಂದ ಕನ್ನಡಿಗರು ಕರ್ನಾಟಕಕ್ಕೆ ವಾಪಸ್ಸು ಬರಲು ಸಹಾಯ ಮಾಡಿದ್ದಾರೆ.

ನಮ್ಮನ್ನು ಭಾರತಕ್ಕೆ ಬರಲು ವ್ಯವಸ್ಥೆ ಮಾಡಿಸಿ ಎಂದು ರಷ್ಯಾದಲ್ಲಿ ಸಿಲುಕಿರುವ ಕನ್ನಡ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದರು. ಇದನ್ನು ನೋಡಿದ್ದ ಸಂಸದ ಜಿಸಿ ಚಂದ್ರಶೇಖರ್ ಅವರು ಕನ್ನಡ ಮಕ್ಕಳ ಮನವಿಗೆ ಸ್ಪಂದಿಸಿ ಅವರನ್ನು ತಾಯ್ನಾಡಿಗೆ ಕರೆತರಲು ಇಚ್ಛಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಪತ್ರ ಬರೆದಿದ್ದರು.

 

 


ಸರ್ಕಾರದ ಹಣದಲ್ಲಿ (ವಂದೇ ಭಾರತ್ ಮಿಷನ್) ಕರೆತರಲು ಆಗದಿದ್ದರೂ ಪರವಾಗಿಲ್ಲ ವಿದ್ಯಾರ್ಥಿಗಳೇ ತಮ್ಮ ಸ್ವಂತ ಹಣದಲ್ಲಿ ಚಾರ್ಟೆಡ್ ಫ್ಲೈಟ್ ಬುಕ್ ಮಾಡಿಕೊಂಡು ಭಾರತಕ್ಕೆ ಬರಲು ಅನುಮತಿ ನೀಡಬೇಕೆಂದು ಜಿಸಿ ಚಂದ್ರಶೇಖರ್ ಪತ್ರ ಬರೆದಿದ್ದರು. ಜಿಸಿ ಚಂದ್ರಶೇಖರ್ ಅವರ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ವಿದೇಶಾಂಗ ಇಲಾಖೆ ರಷ್ಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಭಾರತಕ್ಕೆ ಬರಲು ಅನುಮತಿ ನೀಡಿತ್ತು. ಇದೀಗ ಆ ವಿದ್ಯಾರ್ಥಿಗಳು ರಷ್ಯಾದಿಂದ ಪ್ರಯಾಣ ಬೆಳೆಸಿ ಇಂದು ಮುಂಜಾನೆ ಭಾರತಕ್ಕೆ(ಬೆಂಗಳೂರಿಗೆ) ಬಂದಿಳಿದಿದ್ದಾರೆ.

ಇಂದು ಮುಂಜಾನೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಲ್ಲಾ ವಿದ್ಯಾರ್ಥಿಗಳು ತಾಯ್ನಾಡು ತಲುಪಿದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ವಿದ್ಯಾರ್ಥಿಗಳೆಲ್ಲರೂ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

 

 

ಈ ವಿಚಾರವನ್ನು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಂಸದ ಜಿಸಿ ಚಂದ್ರಶೇಖರ್ “ಇಂದು 209 ಕನ್ನಡದ ಮಕ್ಕಳು ರಷ್ಯಾದಿಂದ ಬೆಂಗಳೂರಿಗೆ ತಲುಪಿದರು. ಇವರ ಜೊತೆ ಗೋವಾ ಕೇರಳ ಮತ್ತು ತಮಿಳುನಾಡಿನ ಮಕ್ಕಳು ಬರಲು ಸಾಧ್ಯವಾಯಿತು. ಎಲ್ಲರೂ ಬೆಂಗಳೂರಿನ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದಾರೆ” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top