fbpx
ಸಮಾಚಾರ

ಸೋಂಕಿತರಿಗಾಗಿ ಈ ಕ್ಷಣಕ್ಕೆ ಎಷ್ಟು ಹಾಸಿಗೆ ಲಭ್ಯವಿದೆ? ಮನೆಯಲ್ಲೇ ಕೂತು ಆನ್​ಲೈನ್​ನಲ್ಲೇ ನೋಡಬಹುದು

ಇನ್ನು ಮುಂದೆ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಎಷ್ಟು ಖಾಲಿ ಇದೆ ಎಂಬ ಮಾಹಿತಿಯನ್ನು ನೀವು ಮೊಬೈಲ್‌ನಲ್ಲೇ ತಿಳಿಯಬಹುದು. ಕೋವಿಡ್‌ 19 ನಿಂದಾಗಿ ಈಗ ಇತರ ರೋಗಿಗಳಿಗೂ ಆಸ್ಪತ್ರೆಗಳಲ್ಲಿ ಬೆಡ್‌ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಬಿಬಿಎಂಪಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ಖಾಲಿ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಸಲು ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರಿಗೆ ಎಷ್ಟು ಬೆಡ್​​ಗಳು ಲಭ್ಯವಿದೆ ಅನ್ನೋ ಮಾಹಿತಿಯನ್ನ ಆನ್​ಲೈನ್​ನಲ್ಲಿಯೇ ಪಡೆಯಬಹುದು ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ ಮಾಹಿತಿ ನೀಡಿದ್ದಾರೆ.

 

 

ಈ ಕುರಿತು ಟ್ವೀಟ್ ಮಾಡಿರುವ ಸುಧಾಕರ್, ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಮತ್ತು ಅದಕ್ಕೆ ಅಗತ್ಯವಾದ ಎಲ್ಲಾ ರೀತಿಯ ಸಿದ್ಧತೆ ಮಾಡುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಗೆ ಲಭ್ಯವಿರುವ ಹಾಸಿಗೆಗಳ ರಿಯಲ್ ಟೈಂ ಮಾಹಿತಿಯನ್ನು ಈಗ ಸಾರ್ವಜನಿಕರು ಆನ್​​​ಲೈನ್​​ನಲ್ಲಿ ಪಡೆಯಬಹುದು ಎಂದು ತಿಳಿಸಿದ್ದಾರೆ.

 

 

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆ ಲಭ್ಯವಿದೆ ಎನ್ನುವುದರ ಲೈವ್ ಅಂಕಿ ಅಂಶಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿದೆ. ಗಂಟೆ ಗಂಟೆಗೂ, ದಿನದಿಂದ ದಿನಕ್ಕೆ ಎಷ್ಟು ಹಾಸಿಗೆ ಖಾಲಿ ಇದೆ, ಎಷ್ಟು ಹಾಸಿಗೆ ಭರ್ತಿ ಆಗಿದೆ, ಎಷ್ಟು ಜನರಲ್ ಬೆಡ್ ಇದೆ, ಐಸಿಯು ಬೆಡ್ ಇದೆ ಎಂಬ ವಿವರವನ್ನು ಹಂಚಿಕೊಂಡಿದೆ.

ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್‌ ಮಾಡಿ: www.chbms.bbmpgov.in/portal/reports/

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top