fbpx
ಸಮಾಚಾರ

ಕೊರೋನಾ ಎಫೆಕ್ಟ್: ಸೆಕ್ಯೂರಿಟಿ ಗಾರ್ಡ್ ಆದ ಸ್ಯಾಂಡಲ್‍ವುಡ್ ನಟ

ಕೊರೊನಾ ಸಂಕಷ್ಟದಿಂದ ಅನೇಕ ಸಮಸ್ಯೆಗಳು ಉಂಟಾಗಿವೆ. ಜನರಿಗೆ ಲಾಕ್‌ಡೌನ್‌, ಸೀಲ್‌ಡೌನ್, ಕ್ವಾರಂಟೈನ್‌ಗಳ ಪರಿಚಯವಾಗಿದೆ. ಅದರ ಜೊತೆಗೆ ಜನ ಜೀವನದಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಅಂದಹಾಗೆ, ಕಿರುತೆರೆ ನಟ, ನಿರ್ದೇಶಕ ಶ್ರೀನಾಥ್ ವಸಿಷ್ಠ ಈಗ ಅಪಾರ್ಟ್‌ಮೆಂಟ್‌ ಸೆಕ್ಯುರಿಟಿ ಗಾರ್ಡ್‌ ಆಗಿದ್ದಾರೆ. ಆದರೆ, ಅವರು ಸೆಕ್ಯುರಿಟಿ ಆಗಿದ್ದರ ಹಿಂದೆಯೂ ಒಂದು ವಿಶೇಷ ಕಾರಣವಿದೆ.

 

 

ಶ್ರೀನಾಥ್ ವಸಿಷ್ಠ ಅಪಾರ್ಟ್‍ಮೆಂಟ್‍ನಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಇತರ ಸಿಬ್ಬಂದಿ ಕೂಡ ಕ್ವಾರಂಟೈನ್ ಆಗಿದ್ದಾರೆ. ಇದರಿಂದ ಆ ಅಪಾರ್ಟ್‍ಮೆಂಟ್‍ನಲ್ಲಿ ವಾಸ ಮಾಡುತ್ತಿರುವ ನಿವಾಸಿಗಳೇ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಹೀಗಾಗಿ ನಟ ಶ್ರೀನಾಥ್ ವಸಿಷ್ಠ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದಾರೆ.

 

The apartment in which I am staying,one of the Security personal has tested positive and three others are quarantined,…

Srinath Vasistha ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜುಲೈ 13, 2020

 

‘ನಾವಿರುವ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್‌ಗೆ ಕೊರೊನಾ ದೃಢವಾಗಿದೆ. ಅವರ ಜೊತೆಗಿದ್ದ ಮೂವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಹಾಗಾಗಿ, ಅಪಾರ್ಟ್‌ಮೆಂಟ್‌ನ ಕಮಿಟಿಯವರು 10 ದಿನಗಳ ಕಾಲ ಸೆಕ್ಯುರಿಟಿ ಕೆಲಸವನ್ನು ನಿವಾಸಿಗಳೇ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಕ್ಕೆ ನಾವೆಲ್ಲ ಒಪ್ಪಿದೆವು ಎಂದು ಬರೆದುಕೊಂಡಿದ್ದಾರೆ.

ಮಧ್ಯಾಹ್ನ 2ರಿಂದ 10 ಗಂಟೆವರೆಗೆ ನನ್ನ ಶಿಫ್ಟ್‌ನ ಕೆಲಸವನ್ನು ಗೇಟ್‌ನ ಬಳಿ ಕುಳಿತುಕೊಂಡು ಮಾಡುತ್ತಿದ್ದೇನೆ. ನಿನ್ನೆ ರಾತ್ರಿ ಶಿಫ್ಟ್ ಅನ್ನು ನನ್ನ ಮಗ ಋತ್ವಿಕ್ ವಸಿಷ್ಠ ಮಾಡಿದ್ದಾನೆ. ಸರ್ವೇಜನ ಸುಖಿನೋ ಭವಂತು ಎಂದು ಶ್ರೀನಾಥ್ ಕೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top